ಗೂಢಚಾರ ಡ್ರೋಣ್‌ ಹೊಡೆದುರುಳಿಸಿದ ಪಾಕ್‌: ಅಲ್ಲಗಳೆದ ಭಾರತ

7

ಗೂಢಚಾರ ಡ್ರೋಣ್‌ ಹೊಡೆದುರುಳಿಸಿದ ಪಾಕ್‌: ಅಲ್ಲಗಳೆದ ಭಾರತ

Published:
Updated:

ಇಸ್ಲಾಮಾಬಾದ್‌: ಭಾರತದ ಗೂಢಚಾರ ಡ್ರೋಣ್‌ (ಕ್ವಾಡ್‌ಕಾಪ್ಟರ್‌) ಅನ್ನು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಬಾಗ್‌ ಸೆಕ್ಟರ್‌ನಲ್ಲಿ ಹೊಡೆದುರುಳಿಸಿರುವುದಾಗಿ ಪಾಕಿಸ್ತಾನದ ಸೇನೆ ಹೇಳಿಕೊಂಡಿದೆ. ಆದರೆ, ಇದನ್ನು ಭಾರತೀಯ ಸೇನೆ ಬಲವಾಗಿ ಅಲ್ಲಗಳೆದಿದೆ.

ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಮತ್ತು ಆಂತರಿಕ ಭದ್ರತಾ ಸೇವೆಯ ಸಾರ್ವಜನಿಮ ಸಂಪರ್ಕ ವಿಭಾಗದ ಡೈರಕ್ಟರ್‌ ಜನರಲ್‌ ಆದ ಮೇಜರ್‌ ಜನರಲ್‌ ಆಸಿಫ್‌ ಘಫೂರ್‌, ಹೊಡೆದುರುಳಿಸಲಾಗಿದೆ ಎನ್ನಲಾದ ಗೂಢಚಾರ ಡ್ರೋಣ್‌ ಚಿತ್ರವನ್ನು ಬುಧವಾರ ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ‘ಪಾಕಿಸ್ತಾನದ ಸೈನಿಕರು ಭಾರತೀಯ ಗೂಢಚಾರ ಡ್ರೋಣ್‌ ಅನ್ನು ಎಲ್‌ಒಸಿಯ ಭಾಗ್‌ ಸೆಕ್ಟರ್‌ನಲ್ಲಿ ಹೊಡೆದುರುಳಿಸಿದೆ. ಅದನ್ನು ಎಲ್‌ಒಸಿ ದಾಟಿ ಒಳಬರಲು ಬಿಟ್ಟಿಲ್ಲ’ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಸೈನಿಕರು ಭಾರತದ ಡ್ರೋಣ್‌ ಅನ್ನು ಎಲ್‌ಒಸಿ ಬಳಿ ಹೊಡೆದುರುಳಿಸಿದ್ದಾರೆ ಎನ್ನುವುದನ್ನು ಭಾರತೀಯ ಸೇನೆಯ ಮೂಲಗಳು ತಳ್ಳಿಹಾಕಿವೆ. ಎಲ್‌ಒಸಿ ಬಳಿ ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಸೇನಾ ಮೂಲಗಳು ನವದೆಹಲಿಯಲ್ಲಿ ಹೇಳಿವೆ.

ಪಾಕಿಸ್ತಾನದ ರಕ್ಷಣಾ ಇಲಾಖೆ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ ಭಾರತದ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !