ಮತ್ತೊಂದು ದಾಳಿಗೆ ಭಾರತದ ಸಿದ್ಧತೆ: ಪಾಕ್‌ ಸಚಿವ ಮಹಮೂದ್‌ ಖುರೇಶಿ

ಮಂಗಳವಾರ, ಏಪ್ರಿಲ್ 23, 2019
33 °C

ಮತ್ತೊಂದು ದಾಳಿಗೆ ಭಾರತದ ಸಿದ್ಧತೆ: ಪಾಕ್‌ ಸಚಿವ ಮಹಮೂದ್‌ ಖುರೇಶಿ

Published:
Updated:

ಇಸ್ಲಾಮಾಬಾದ್‌: ‘ಏಪ್ರಿಲ್ 16ರಿಂದ 20ರೊಳಗೆ ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಶಿ ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. 

‘ಹೊಸ ದಾಳಿಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಪಾಕಿಸ್ತಾನದ ಮೇಲೆ ತಾವು ಹೊಂದಿರುವ ದ್ವೇಷ ಎಂಥದ್ದು ಎಂಬುದನ್ನು ಸಾಬೀತುಪಡಿಸಲು ಇಂತಹ ದಾಳಿಗಳು ಭಾರತಕ್ಕೆ ಅವಶ್ಯಕವಾಗಿವೆ. ಅಲ್ಲದೆ, ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸಲು ಭಾರತ 
ಇದನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ’ ಎಂದು ತಿಳಿಸಿದ್ದಾರೆ.

‘ಒಂದು ವೇಳೆ, ಮತ್ತೊಮ್ಮೆ ದಾಳಿ ನಡೆದರೆ, ಈ ವಲಯದಲ್ಲಿನ ಶಾಂತಿ ಮತ್ತು ಸ್ಥಿರತೆ ಮೇಲೆ ಎಂತಹ ಪರಿಣಾಮ ಉಂಟಾಗಬಹುದು ಎಂಬುದನ್ನು ಊಹಿಸಿ’ ಎಂದು ಅವರು ಹೇಳಿದ್ದಾರೆ.

‘ಭಾರತದ ಇಂತಹ ಬೇಜವಾಬ್ದಾರಿ ವರ್ತನೆಯನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸಬೇಕು’ ಎಂದೂ ಅವರು ಹೇಳಿದ್ದಾರೆ.

ಈ ಕುರಿತು, ಈಗಾಗಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಗಮನಕ್ಕೂ ತರಲಾಗಿದೆ ಎಂದೂ ಹೇಳಿದ್ದಾರೆ.

‘ಬೇಜವಾಬ್ದಾರಿ ಹೇಳಿಕೆ’
ನವದೆಹಲಿ (ಪಿಟಿಐ):
‘ಪಾಕಿಸ್ತಾನದ ವಿದೇಶಾಂಗ ಸಚಿವರು ಬೇಜವಾಬ್ದಾರಿ ಮತ್ತು ಅಸಮಂಜಸ ಹೇಳಿಕೆ ನೀಡಿದ್ದಾರೆ’ ಎಂದು ಭಾರತ ಪ್ರತಿಕ್ರಿಯಿಸಿದೆ.

‘ಪಾಕಿಸ್ತಾನದ ಹೇಳಿಕೆ ಹಾಸ್ಯಾಸ್ಪದದಿಂದ ಕೂಡಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !