ಜಿಗಜಿಣಗಿ ಬೆನ್ನಿಗೆ ಪಂಚಮಸಾಲಿ ಸಮಾಜವಿದೆ: ಡಾ.ಸುರೇಶ ಬಿರಾದಾರ

ಶುಕ್ರವಾರ, ಮೇ 24, 2019
28 °C

ಜಿಗಜಿಣಗಿ ಬೆನ್ನಿಗೆ ಪಂಚಮಸಾಲಿ ಸಮಾಜವಿದೆ: ಡಾ.ಸುರೇಶ ಬಿರಾದಾರ

Published:
Updated:

ವಿಜಯಪುರ: ‘ರಮೇಶ ಜಿಗಜಿಣಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಸರಳ, ಸಜ್ಜನಿಕೆಯ ಪ್ರತೀಕವಾಗಿರುವ ಅವರ ಬೆನ್ನಿಗೆ ಪಂಚಮಸಾಲಿ ಸಮಾಜ ಇದೆ. ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ಡಾ.ಸುರೇಶ ಬಿರಾದಾರ ತಿಳಿಸಿದರು.

‘ಜಿಗಜಿಣಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಎಂದೂ ರಾಜಕಾರಣ ಮಾಡಿಲ್ಲ. ಎಲ್ಲರೂ ಒಂದೇ ಜಾತಿ ಎಂದು ನಡೆಯುತ್ತಿದ್ದಾರೆ. ಕಾಕಾ, ಬಾಬಾ, ಮಾಮಾ... ಎಂದು ಆತ್ಮೀಯತೆಯಿಂದ ಎಲ್ಲರನ್ನೂ ಮಾತನಾಡಿಸುತ್ತಾರೆ. ಸಣ್ಣವರಿರಲಿ, ದೊಡ್ಡವರಿರಲಿ ಗೌರವದಿಂದ ಕಾಣುತ್ತಾರೆ’ ಎಂದು ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಯಾರೊಂದಿಗೂ ದ್ವೇಷ ಸಾಧಿಸುವ ರಾಜಕಾರಣಿ ಅವರಲ್ಲ. ಎಲ್ಲ ಸಮುದಾಯ ಬೆಂಬಲ ನೀಡುತ್ತಿದೆ. ಪಂಚಮಸಾಲಿ ಸಮಾಜದ ಹಲ ಕೆಲಸಗಳನ್ನು ಜಿಗಜಿಣಗಿ ಮಾಡಿದ್ದಾರೆ. ಸಮಾಜದ ವತಿಯಿಂದ ಸಂಪೂರ್ಣ ಬೆಂಬಲ ದೊರಕುವ ವಿಶ್ವಾಸವಿದೆ’ ಎಂದರು.

‘ನಮ್ಮ ಸಮಾಜದ ಕೆಲ ನಾಯಕರು ಜಿಗಜಿಣಗಿ ಅನ್ಯಾಯ ಮಾಡಿದ್ದಾರೆ. ಪಂಚಮಸಾಲಿ ಸಮಾಜ ತುಳಿಯುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಜನರನ್ನು ತಪ್ಪುದಾರಿಗೆ ಒಯ್ಯುತ್ತಿದ್ದಾರೆ. ಜಿಗಜಿಣಗಿ ಅವರ ಏಳ್ಗೆ ಸಹಿಸದ ಕೆಲವು ವ್ಯಕ್ತಿಗಳು ಸುಳ್ಳು ಸುದ್ದಿ ಹಬ್ಬಿಸಿ ಅವರನ್ನು ಸೋಲಿಸಲು ಷಡ್ಯಂತ್ರ ನಡೆಸಿದ್ದಾರೆ’ ಎಂದು ಗಂಭೀರವಾಗಿ ಆರೋಪಿಸಿದರು.

‘ಸಮಾಜದ ವತಿಯಿಂದ ಜಿಗಜಿಣಗಿ ವಿರುದ್ಧವಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಾರಿ ಸಮಾಜವು ರಮೇಶ ಜಿಗಜಿಣಗಿ ಹೆಚ್ಚು ಮತಗಳಿಂದ ಆಯ್ಕೆ ಮಾಡಲು ಶ್ರಮಿಸಲಿದೆ’ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಸೋಮನಗೌಡ ಯರನಾಳ, ಶಂಕರ ಪಾಟೀಲ, ರಾಜು ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !