ಪಾಂಡಾ ಹುಟ್ಟುಹಬ್ಬ

7

ಪಾಂಡಾ ಹುಟ್ಟುಹಬ್ಬ

Published:
Updated:
Prajavani

ಕ್ವಾಲಾಲಂಪುರ: ಮಲೇಷ್ಯಾದ ರಾಷ್ಟ್ರೀಯ ಉದ್ಯಾನದಲ್ಲಿ ಸೋಮವಾರ ಹುಟ್ಟುಹಬ್ಬದ ಸಂಭ್ರಮವಿತ್ತು. ಜನ್ಮದಿನ ಆಚರಿಸಿಕೊಂಡಿದ್ದು ಮರಿ ಪಾಂಡಾ. ವರ್ಷ ಒಂದೇ ಆಗಿದ್ದರೂ ಅದರ ತೂಕ ಮಾತ್ರ 34 ಕೆ.ಜಿ.!

ಪ್ರವಾಸಿಗರ ಎದುರು ಪಾಂಡಾ ಹುಟ್ಟುಹಬ್ಬ ಆಚರಿಸಿಕೊಂಡಿತು. ದೊಡ್ಡ ಮೇಜಿನ ಮೇಲೆ ಐಸ್‌ಕ್ರೀಮ್‌ನಿಂದ ಮಾಡಿದ್ದ ಕೇಕ್ ಹಾಗೂ ಕ್ಯಾರೆಟ್‌ಗಳನ್ನು ಸಿಂಗರಿಸಿ ಇಡಲಾಗಿತ್ತು. ಈ ಪಾಂಡಾಗೆ ಹೆಸರಿಟ್ಟಿಲ್ಲ. ಇವಳ ಅಣ್ಣ ನುವಾನ್ ನುವಾನ್ 2015ರಲ್ಲಿ ಜನಿಸಿದ್ದ. 

ಇವರ ಅಪ್ಪ–ಅಮ್ಮ ಲಿಯಾಂಗ್ ಲಿಯಾಂಗ್ ಮತ್ತು ಕ್ಸಿಂಗ್ ಕ್ಸಿಂಗ್ ಚೀನಾದಿಂದ 2014ರಲ್ಲಿ ಕ್ವಾಲಾಲಂಪುರಕ್ಕೆ ಬಂದವರು. ಎರಡೂ ದೇಶಗಳ ಒಪ್ಪಂದದ ಅನ್ವಯ ಮರಿ ಪಾಂಡಾಗೆ ಎರಡು ವರ್ಷ ತುಂಬಿದ ಬಳಿಕ ಅದನ್ನು ಚೀನಾಕ್ಕೆ ಹಸ್ತಾಂತರಿಸಬೇಕಿದೆ. 

ಚೀನಾದ ಬಿದಿರು ಅರಣ್ಯದಲ್ಲಿ ಸುಮಾರು 1,800 ದೈತ್ಯ ಪಾಂಡಾಗಳಿವೆ ಎಂದು ಅಂದಾಜಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !