‘ಆತ್ಮದಲ್ಲೇ ಸಕಲ ಶಕ್ತಿ’

ಬುಧವಾರ, ಜೂಲೈ 24, 2019
27 °C
ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವ

‘ಆತ್ಮದಲ್ಲೇ ಸಕಲ ಶಕ್ತಿ’

Published:
Updated:
Prajavani

ಮೈಸೂರು: ಆಷಾಢ ಮಾಸದ ನಂದೀಶ್ವರ ಅಷ್ಟಾಹ್ನಿಕ ಪರ್ವಕ್ಕೆ ಮಂಗಳವಾರ ರಾತ್ರಿ ನಗರದ ಶಾಂತೀಶ್ವರಸ್ವಾಮಿ ಬಸದಿ (ಕೋಟೆ ಬಸದಿ)ಯಲ್ಲಿ ಚಾಲನೆ ನೀಡಲಾಯಿತು.

ಪದ್ಮಶ್ರೀ ಜೈನ ಮಹಿಳಾ ಸಮಾಜದ ಶೀಲಾ ಅನಂತರಾಜ್ ದೀಪ ಬೆಳಗಿಸುವ ಮೂಲಕ ಪರ್ವಕ್ಕೆ ಚಾಲನೆ ನೀಡಿದರು.

ನಿವೃತ್ತ ಮುಖ್ಯ ಎಂಜಿನಿಯರ್, ಪ್ರವಚನಕಾರ ಎ.ಆನಂದಕುಮಾರ್ ಮಾತನಾಡಿ ‘ಆತ್ಮದಲ್ಲಿ ಸಕಲ ಶಕ್ತಿ ಅಡಗಿದೆ. ಮೋಕ್ಷಕ್ಕೂ ಸನ್ಮಾರ್ಗ ತೋರಲಿದೆ. ಮೋಕ್ಷ ಪ್ರಾಪ್ತಿಯ ಶಕ್ತಿ ನಮ್ಮಲ್ಲೇ ಅಡಗಿದ್ದು, ಚೈತನ್ಯ ಶಕ್ತಿಯ ಮೂಲಕ ಅದನ್ನು ಕಂಡುಕೊಳ್ಳಬೇಕಿದೆ’ ಎಂದರು.

‘ಸುಖ–ದುಃಖ ಜೀವದ್ರವ್ಯಕ್ಕೆ ಸಂಬಂಧಿಸಿದ್ದು. ದ್ರವ್ಯ ಮತ್ತು ಗುಣ ಶಕ್ತಿಯ ರೂಪದಲ್ಲಿದೆ. ಇಂದು ನಾವು ಕೇಳೋದು ಬೇರೆ. ಸ್ವೀಕರಿಸೋದು ಬೇರೆ ಎಂಬಂತಹ ಬದುಕು ಸಾಗಿಸುತ್ತಿದ್ದೇವೆ. ಇದಲ್ಲ ಜೀವನ’ ಎಂದು ಹೇಳಿದರು.

‘ಜೀವ ಇರೋದೇ ಚೈತನ್ಯ ಶಕ್ತಿ. ಚೈತನ್ಯ ಇಲ್ಲದಿರುವುದೇ ಅಜೀವ ಶಕ್ತಿ. ಚೈತನ್ಯ ಶಕ್ತಿಗೆ ನೋಡುವ–ತಿಳಿಯುವ ಶಕ್ತಿಯಿದೆ. ಜೀವ ಇರೋ ತನಕ ಲವಲವಿಕೆಯಿಂದ ಬದುಕಬೇಕು. ಪಂಚೇಂದ್ರೀಯ ಆತ್ಮಕ್ಕೆ ಸಂಬಂಧಿಸಿದವು’ ಎಂದರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‌ಕುಮಾರ್, ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್‌ನ ಎಸ್‌.ಬಿ.ಸುರೇಶ್‌ ಜೈನ್‌, ಸೇವಾರ್ಥದಾರರಾದ ವಿದ್ಯಾರಣ್ಯಪುರಂನ ಪದ್ಮಾ ಧನ್ಯಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !