ಪಿಇಎಸ್‌ ಕಾಲೇಜಿನ 618 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಇಂದು

7

ಪಿಇಎಸ್‌ ಕಾಲೇಜಿನ 618 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಇಂದು

Published:
Updated:

ಬೆಂಗಳೂರು: ಪಿಇಎಸ್‌ ತಾಂತ್ರಿಕ ಕಾಲೇಜಿನ ‘ವಾರ್ಷಿಕ ಪದವಿ ಪ್ರದಾನ’ ಕಾರ್ಯಕ್ರಮವನ್ನು ಸೆಪ್ಟೆಂಬರ್‌ 15ರಂದು ಆಯೋಜಿಸಲಾಗಿದೆ. ಈ ಬಾರಿ 618 ವಿದ್ಯಾರ್ಥಿಗಳು ಪದವಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. 

‘ಪದವಿ ಮುಗಿಸಿದವರಲ್ಲಿ 514 ವಿದ್ಯಾರ್ಥಿಗಳು ಪ್ಲೇಸ್‌ಮೆಂಟ್‌ಗೆ ಅರ್ಹರಾಗಿದ್ದರು, ಅವರಲ್ಲಿ 350 ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಉದ್ಯೋಗ ಅವಕಾಶವನ್ನು ಒಪ್ಪಿಕೊಂಡಿದ್ದಾರೆ’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ.ಆರ್‌.ದೊರೆಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. 

‘ಪ್ಲೇಸ್‌ಮೆಂಟ್‌ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಆಯ್ಕೆ ಆದವರಿಗೆ ವಾರ್ಷಿಕ ₹3 ಲಕ್ಷದಿಂದ ₹25 ಲಕ್ಷದವರೆಗೆ ಪ್ಯಾಕೇಜ್‌ ನೀಡಲು ಖಾಸಗಿ ಕಂಪನಿಗಳು ಮುಂದೆ ಬಂದಿವೆ. ಕೆಲವು ವಿದ್ಯಾರ್ಥಿಗಳು ಸ್ವಯಂ ಉದ್ಯೋಗ ಮತ್ತು ಉನ್ನತ ವ್ಯಾಸಂಗದ ಕಡೆ ಒಲವು ತೋರಿದ್ದಾರೆ’ ಎಂದು ಅವರು ತಿಳಿಸಿದರು.

‘ಆಸ್ಟ್ರೇಲಿಯಾದ ಅಟ್ಲಾಸ್ಸಿಯನ್‌ ಸಾಫ್ಟ್‌ವೇರ್‌ ಕಂಪನಿಯು ಅಂತಿಮ ವರ್ಷದ ವಿದ್ಯಾರ್ಥಿ ಸುಮಿತ್‌ ಪಡವಾಲರಿಗೆ ವಾರ್ಷಿಕ ₹48 ಲಕ್ಷ ಪ್ಯಾಕೇಜ್‌ ನಿಗದಿಪಡಿಸಿ ಉದ್ಯೋಗ ನೀಡಿದೆ. ವಿದ್ಯಾರ್ಥಿಗಳಿಗೆ ವಿದೇಶದ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !