13 ಕ್ಕೆ ಪ್ರಧಾನಿ ಮೋದಿ ರ‍್ಯಾಲಿ

ಸೋಮವಾರ, ಏಪ್ರಿಲ್ 22, 2019
31 °C
*13ರಂದು ರ‍್ಯಾಲಿ* ಲಕ್ಷ ಕಾರ್ಯಕರ್ತರನ್ನು ಸೇರಿಸಲು ಸಿದ್ಧತೆ

13 ಕ್ಕೆ ಪ್ರಧಾನಿ ಮೋದಿ ರ‍್ಯಾಲಿ

Published:
Updated:
Prajavani

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 13ರಂದು ಸಂಜೆ 5.30ಕ್ಕೆ ನಗರದ ಅರಮನೆ ಮೈದಾನದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.

ಸಮಾವೇಶದ ಸಲುವಾಗಿ ಅರಮನೆ ಮೈದಾನದಲ್ಲಿ ಬಿಜೆಪಿ ನಾಯಕರು ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಆರ್‌.ಅಶೋಕ್‌, ‘ನಗರದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಾತಾವರಣ ಇದೆ. ಮೋದಿ ರ‍್ಯಾಲಿ ಮೂಲಕ ಬಿರುಗಾಳಿ ಉಂಟಾಗಲಿದೆ. ಇದರಿಂದಾಗಿ, ನಮ್ಮ ಅಭ್ಯರ್ಥಿಗಳು ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ಪಕ್ಷ ಜೆಡಿಎಸ್‌ ಪಕ್ಷದಂತೆ ನಿಂಬೆಕಾಯಿ ಪಕ್ಷವಲ್ಲ. ಜನಪರ ಹಾಗೂ ಜನಕಲ್ಯಾಣ ಬಯಸುವ ಪಕ್ಷ. ರಾಜ್ಯದಲ್ಲಿ ಪಕ್ಷ 22ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ’ ಎಂದು ಅವರು ಹೇಳಿದರು.

ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಸಮ್ಮಿಶ್ರ ಸರ್ಕಾರ ಶೇ 20 ಕಮಿಷನ್‌ ಸರ್ಕಾರ. ಇದರಲ್ಲಿ ಶೇ 10ರಷ್ಟು ಕಾಂಗ್ರೆಸ್‌ಗೆ ಹಾಗೂ ಶೇ 10ರಷ್ಟು ಜೆಡಿಎಸ್‌ಗೆ ಕಮಿಷನ್ ಹೋಗುತ್ತಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !