ನನ್ನ ಕನಸು

ಮಂಗಳವಾರ, ಮಾರ್ಚ್ 19, 2019
26 °C

ನನ್ನ ಕನಸು

Published:
Updated:
Prajavani

ಅಮ್ಮ ನಾನೂ ನೀನು
ಆಕಾಶಕೆ ಹಾರೋಣವೇನು?
ಹಕ್ಕಿಯ ಕಣ್ಣಲಿ ಭೂಮಿ
ಹೇಗಿರುವುದು ನೋಡೋಣವೇನು?

 ದೇವರು ಬರೆದಿಹ ಚಿತ್ರಪ್ರಕೃತಿ ಸುರಿದಿಹ ಬಣ್ಣ
ಹಾರುತ ಹಾರುತ ನೋಡಿ
ತುಂಬಿಸಿಕೊಳ್ಳೋಣ ಕಣ್ಣ! 

ಮೋಡದ ಮೈಯಲಿ ತೂರಿ
ಮಳೆಯನು ಮಾತಾಡಿಸೋಣ
ಹದ್ದಿನ ಪಕ್ಕಕೆ ಹಾರಿ ಒಂದು ಹಾಯ್ ಹೇ
ಳಿಬಿಡೋಣ!

ಓಝೋನ್ ಪದರದ ತೂತು
ಸಾಧ್ಯವಾದರೆ ಹೊಲಿದುಬಿಡೋಣ
‘ಹೊಗೆಯನು ಬಿಡದಿರು ಹೆಚ್ಚು’
ವಿಮಾನದ ಕಿವಿ ಹಿಂಡೋಣ! 

ಅಮ್ಮ ಇದು ನನ್ನ ಕನಸೇ
ಹೇಳೇ ಈಡೇರುವುದೇನು?
ಭೂಮಿಯ ಜಂಜಡ ಮರೆತು
ಸೇರೋಣ ನಾವು ಬಾನು! 

Tags: 

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !