ಇನ್‌ಸ್ಪೆಕ್ಟರ್‌ ಬಂಧನ; ನ್ಯಾಯಾಂಗ ಕಸ್ಟಡಿಗೆ

7

ಇನ್‌ಸ್ಪೆಕ್ಟರ್‌ ಬಂಧನ; ನ್ಯಾಯಾಂಗ ಕಸ್ಟಡಿಗೆ

Published:
Updated:

ಬೆಂಗಳೂರು: ಸುಳ್ಳು ಪ್ರಕರಣ ದಾಖಲಿಸುವುದಾಗಿ ಹೇಳಿ ಸ್ನೂಕರ್‌ ಕ್ಲಬ್ ಮಾಲೀಕರಿಂದ 30 ಸಾವಿರ ವಸೂಲಿ ಮಾಡುತ್ತಿದ್ದ ಆರೋಪದಡಿ ಬಾಣಸವಾಡಿ ಇನ್‌ಸ್ಪೆಕ್ಟರ್‌ ಡಿ.ಎಚ್‌.ಮುನಿಕೃಷ್ಣ, ಕಾನ್‌ಸ್ಟೆಬಲ್ ಉಮೇಶ್‌ ಹಾಗೂ ಮಧ್ಯವರ್ತಿ ಅಶ್ರಫ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.

ಬಾಣಸವಾಡಿಯಲ್ಲಿ ಕ್ಲಬ್‌ ನಡೆಸುತ್ತಿರುವ ಸೈಯದ್ ಇಸ್ಮಾಯಿಲ್, ಆರೋಪಿಗಳ ವಿರುದ್ಧ ದೂರು ನೀಡಿದ್ದರು. ಶನಿವಾರ ಹಣ ಪಡೆಯುವಾಗಲೇ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಎಸಿಬಿ ಅಧಿಕಾರಿಗಳು, ಭಾನುವಾರ ನಸುಕಿನಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶ, ಆರೋಪಿಗಳನ್ನು 14 ದಿನಗಳವರೆಗೆ ನ್ಯಾಯಾಂಗ ಕಸ್ಟಡಿಗೆ ನೀಡಿದರು.

‘ಆರೋಪಿಗಳು, ದೂರುದಾರರಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದರು. ಆ ಬಗ್ಗೆ ಮೂವರಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

 

 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !