ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ಸಿರಿವಂತ ದೇಶ ಭಾರತ

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ವಿಶ್ವದ ಸಿರಿವಂತ ದೇಶಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲಿ ಇದೆ.

‘ನ್ಯೂ ವರ್ಲ್ಡ್‌ ವೆಲ್ತ್‌’ ವರದಿ ಪ್ರಕಾರ ಭಾರತೀಯರ ಒಟ್ಟು ಖಾಸಗಿ ಸಂಪತ್ತು  ₹ 534 ಲಕ್ಷ ಕೋಟಿಗಳಷ್ಟಿದೆ. ಕಳೆದ ವರ್ಷ ಭಾರತ 7ನೇ ಸ್ಥಾನದಲ್ಲಿತ್ತು.  ಅಮೆರಿಕವು ಮೊದಲ ಸ್ಥಾನದಲ್ಲಿ ಇದೆ. ಸಂಪತ್ತಿನ ಮಾರುಕಟ್ಟೆಯಲ್ಲಿ ಭಾರತದ ಸಾಧನೆ ಅತ್ಯುತ್ತಮವಾಗಿದೆ. 2016ರಲ್ಲಿ  ಈ ಸಂಪತ್ತು ₹ 427 ಲಕ್ಷ ಕೋಟಿಗಳಷ್ಟಿತ್ತು. 2017ರಲ್ಲಿ ಶೇ 25ರಷ್ಟು ಏರಿಕೆ ದಾಖಲಿಸಿದೆ.

ವ್ಯಕ್ತಿಗಳ ಖಾಸಗಿ ಸಂಪತ್ತು ಆಧರಿಸಿ ಈ ಸ್ಥಾನಮಾನ ನಿಗದಿ ಮಾಡಲಾಗಿದೆ. ಈ ಸಂಪತ್ತಿನ ಲೆಕ್ಕದಲ್ಲಿ ಆಸ್ತಿ, ನಗದು, ಷೇರು, ವಹಿವಾಟು ಪರಿಗಣಿ
ಸಲಾಗಿದೆ. ಸಾಲದ ಮೊತ್ತವನ್ನು ಈ ಸಂಪತ್ತಿನ ಲೆಕ್ಕದಿಂದ ಹೊರಗೆ ಇಡಲಾಗಿದೆ. ಜತೆಗೆ ಸರ್ಕಾರದ ನಿಧಿಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ವ್ಯಕ್ತಿಗತ ಸಂಪತ್ತು ಏರಿಕೆ: 2007 ರಿಂದ 2017ರ ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ ವ್ಯಕ್ತಿಗತ ಸಂಪತ್ತು  ₹ 205 ಲಕ್ಷ ಕೋಟಿಗಳಿಂದ ₹ 534 ಲಕ್ಷ ಕೋಟಿಗಳಿಗೆ ಏರಿಕೆಯಾಗಿ ಶೇ 160ರಷ್ಟು ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಚೀನಾದ ಸಂಪತ್ತು ಶೇ 22ರಷ್ಟು ಮತ್ತು ಜಾಗತಿಕ ಸಂಪತ್ತು ಶೇ 12ರಷ್ಟು ಏರಿಕೆ ಕಂಡಿದೆ.

ಭಾರತದಲ್ಲಿ ₹ 6.50 ಕೋಟಿ ಅಥವಾ ಇದಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ಹೊಂದಿದವರ ಸಂಖ್ಯೆ 3.30 ಲಕ್ಷ ಇದೆ.

ಈ ಮಾನದಂಡದ ಪ್ರಕಾರ ಭಾರತ 9ನೇ ಸ್ಥಾನದಲ್ಲಿ ಇದೆ. 20,730 ಕೋಟ್ಯಧಿಪತಿಗಳು ಭಾರತದಲ್ಲಿ (7ನೆ ಸ್ಥಾನ) ಇದ್ದಾರೆ.

ಷೇರುಪೇಟೆಯ ಕೊಡುಗೆ: ಜನರ ವೈಯಕ್ತಿಕ ಸಂಪತ್ತು ಹೆಚ್ಚಳದಲ್ಲಿ ಷೇರುಪೇಟೆಯ ಕೊಡುಗೆ ಪ್ರಮುಖವಾಗಿದೆ. ಷೇರುಪೇಟೆಯಲ್ಲಿನ ಗರಿಷ್ಠ ವಹಿವಾಟಿನ ಕಾರಣಕ್ಕೆ ಕಳೆದ ಒಂದು ವರ್ಷದಲ್ಲಿ ಭಾರತ, ಅಮೆರಿಕ, ಚೀನಾ, ಜಪಾನ್‌ ಮತ್ತು ಆಸ್ಟ್ರೇಲಿಯಾದ ಶ್ರೀಮಂತರ ಸಂಪತ್ತು ಗಮನಾರ್ಹ ಏರಿಕೆ ಕಂಡಿದೆ.

2017ರಲ್ಲಿ ಗಣನೆಗೆ ತೆಗೆದುಕೊಂಡ ಸಂಪತ್ತು ಆಧರಿಸಿ ಹೇಳುವುದಾದರೆ, ಅಮೆರಿಕದ ಸಂಪತ್ತು 4,197 ಲಕ್ಷ ಕೋಟಿಗಳಷ್ಟಿದೆ. ನಂತರದ ಸ್ಥಾನದಲ್ಲಿ ಚೀನಾ, ಜಪಾನ್‌, ಇಂಗ್ಲೆಂಡ್‌, ಜರ್ಮನಿ ದೇಶಗಳಿವೆ. ಫ್ರಾನ್ಸ್‌, ಭಾರತ ನಂತರದ (7) ಸ್ಥಾನದಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT