ಭಾರತ–ಪಾಕ್‌ ನಡುವಿನ ಉದ್ವಿಗ್ನತೆ ಶಮನ: ಪಾಂಪಿಯೊ ಮಹತ್ವದ ಪಾತ್ರ

ಬುಧವಾರ, ಮಾರ್ಚ್ 27, 2019
26 °C
ಅಮೆರಿಕ ವಿದೇಶಾಂಗ ಇಲಾಖೆ ಉಪ ವಕ್ತಾರ ರಾಬರ್ಟ್‌ ಪೆಲಾಡಿನೋ ಹೇಳಿಕೆ

ಭಾರತ–ಪಾಕ್‌ ನಡುವಿನ ಉದ್ವಿಗ್ನತೆ ಶಮನ: ಪಾಂಪಿಯೊ ಮಹತ್ವದ ಪಾತ್ರ

Published:
Updated:

ವಾಷಿಂಗ್ಟನ್‌ (ಪಿಟಿಐ): ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ವಾರ ಉಂಟಾಗಿದ್ದ ಯುದ್ಧ ಕಾರ್ಮೋಡದ ವಾತಾವರಣ ಶಮನಗೊಳಿಸುವಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

ಕಳೆದ ವಾರ ವಿಯೆಟ್ನಾಮ್‌ನಲ್ಲಿ ಹನೋಯ್‌ ಶೃಂಗಸಭೆ ನಡೆಯುತ್ತಿದ್ದಾಗ ಭಾರತ - ಪಾಕ್‌ ನಡುವಿನ ಉದ್ವಿಗ್ನತೆಯು ಯುದ್ಧ ಸಂಭವಿಸುವ ಹಂತಕ್ಕೆ ತಲುಪಿತ್ತು. ಆಗ ಮೈಕ್‌ ಪಾಂಪಿಯೊ ಅವರು ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ ನಡೆಸಿದ್ದರು. ಮಾತುಕತೆ ಯಶಸ್ವಿಯಾಗಿ ಉಭಯ ದೇಶಗಳು ಯುದ್ಧಕ್ಕೆ ಅವಕಾಶ ನೀಡದಂತೆ, ಉದ್ವಿಗ್ನತೆ ಶಮನಗೊಳಿಸಲು ಒಪ್ಪಿದವು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ರಾಬರ್ಟ್‌ ಪೆಲಾಡಿನೋ ತಿಳಿಸಿದ್ದಾರೆ.

ಈ ಮಾತುಕತೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಢೊವಾಲ್‌ ಮತ್ತು ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್‌ ಕುರೇಶಿ ಭಾಗವಹಿಸಿದ್ದರು.

ಇದೇ ವರ್ಷದ ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಕೇಂದ್ರೀಯ ಶಸಸ್ತ್ರ ಪಡೆಯ (ಸಿಆರ್‌ಪಿಎಫ್ ) ವಾಹನಗಳ ಮೇಲೆ ಆತ್ಮಾಹುತಿ ಬಾಂಬ್‌ ದಾಳಿಕೋರ ದಾಳಿ ನಡೆಸಿದ ಪರಿಣಾಮ 40 ಸಿಬ್ಬಂದಿ ಬಲಿಯಾಗಿದ್ದರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಷ್‌ ಎ ಮೊಹಮದ್‌ (ಜೆಇಎಂ) ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಈ ಘಟನೆಯ ನಂತರ ಭಾರತವು ‍ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದ್ದರಿಂದ ಎರಡು ದೇಶಗಳ ನಡುವೆ ಯುದ್ಧ ನಡೆಯುವ ಆತಂಕದ ವಾತಾವರಣ ಉಂಟಾಗಿತ್ತು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !