ಚೌಕೀದಾರರಿಗೆ ಅವಮಾನ ಕ್ಷಮೆಯಾಚಿಸಿದ ಮೋದಿ

ಶುಕ್ರವಾರ, ಏಪ್ರಿಲ್ 26, 2019
28 °C
ವಾಚ್‌ಮೆನ್‌ಗಳ ಜೊತೆ ಆಡಿಯೊ ಸಂವಾದ

ಚೌಕೀದಾರರಿಗೆ ಅವಮಾನ ಕ್ಷಮೆಯಾಚಿಸಿದ ಮೋದಿ

Published:
Updated:

ನವದೆಹಲಿ: ದೇಶದ ವಿವಿಧ ಭಾಗಗಳ ವಾಚ್‌ಮೆನ್‌ಗಳ (ಚೌಕೀದಾರ) ಜೊತೆ ಬುಧವಾರ ಆಡಿಯೊ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶದಲ್ಲಿ ಕೆಲವರು ‘ಚೌಕೀದಾರ್‌ ಚೋರ್‌ ಹೈ’ ಎಂಬ ಘೋಷಣೆ ಕೂಗುತ್ತಿದ್ದು, ಅದಕ್ಕಾಗಿ ನಾನು ಎಲ್ಲ ಚೌಕೀದಾರರ ಕ್ಷಮೆ ಯಾಚಿಸುತ್ತೇನೆ’ ಎನ್ನುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಟಾಂಗ್‌ ಕೊಟ್ಟರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾವು ಆರಂಭಿಸಿದ ‘ಮೈ ಭೀ ಚೌಕೀದಾರ್‌’ ಅಭಿಯಾನದ ಅಂಗವಾಗಿ ಮೋದಿ ಸಂವಾದ ನಡೆಸಿದ್ದರು.

‘ಸ್ವಾರ್ಥ ಸಾಧನೆಗಾಗಿ ಕೆಲವರು ಚೌಕೀದಾರರನ್ನು ನಿಂದಿಸುತ್ತಿದ್ದಾರೆ, ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ನೇರವಾಗಿ ನನ್ನ ವಿರುದ್ಧ ಆರೋಪ ಮಾಡುವ ಧೈರ್ಯ ಇಲ್ಲದವರು ನಿಮ್ಮನ್ನು ನಿಂದಿಸುತ್ತಿದ್ದಾರೆ’ ಎಂದು ರಾಹುಲ್‌ ಮೇಲೆ ವಾಗ್ದಾಳಿ ನಡೆಸಿದರು.

ರಫೇಲ್‌ ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಮೋದಿ ವಿರುದ್ಧ ಆರೋಪ ಮಾಡುವ ಸಂದರ್ಭದಲ್ಲೆಲ್ಲ ರಾಹುಲ್‌ ಗಾಂಧಿ ‘ಚೌಕೀದಾರ್‌ ಚೋರ್‌ ಹೈ’ (ಚೌಕೀದಾರ ಚೋರ) ಮಾತನ್ನು ಬಳಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 24

  Happy
 • 2

  Amused
 • 1

  Sad
 • 1

  Frustrated
 • 3

  Angry

Comments:

0 comments

Write the first review for this !