ಪರಿಸರ ಜಾಗೃತಿಗೆ ‘ಪ್ರೈಡ್‌ ರನ್‌’

ಭಾನುವಾರ, ಮೇ 26, 2019
27 °C

ಪರಿಸರ ಜಾಗೃತಿಗೆ ‘ಪ್ರೈಡ್‌ ರನ್‌’

Published:
Updated:
Prajavani

ಬೆಂಗಳೂರು: ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಕಬ್ಬನ್‌ ಉದ್ಯಾನದ ಸೆಕ್ರೆಟರಿ ಕ್ಲಬ್‌ನಲ್ಲಿ ಭಾನುವಾರ ‘ಪ್ರೈಡ್‌ ರನ್‌’ ಏರ್ಪಡಿಸಲಾಗಿತ್ತು.

ಕ್ರೋನಿಕ್‌ ‍ಫೌಂಡೇಷನ್‌ ಹಾಗೂ ಅರಣ್ಯ ಇಲಾಖೆ ಆಯೋಜಿಸಿದ್ದ ಈ ಓಟದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಫೌಂಡೇಷನ್‌ನ ಸದಸ್ಯರು ಮತ್ತು ಸಾರ್ವಜನಿಕರಿಗೆ‌‌‌ 10 ಕಿ.ಮೀ ಮತ್ತು 5 ಕಿ.ಮೀ ಓಡುವ ಗುರಿ ನಿಗದಿಪಡಿಸಲಾಗಿತ್ತು.

ಬೆಳ್ಳಂಬೆಳಿಗ್ಗೆ ಕಬ್ಬನ್‌ ಉದ್ಯಾನಕ್ಕೆ ಬಂದಿದ್ದ ವಾಯುವಿಹಾರಗಳಿಗೆ ಜಾಗೃತಿ ಮೂಡಿಸುತ್ತಾ ಓಡಿದರು. ಓಟಕ್ಕೆ ನೋಂದಣಿ ಮಾಡಿಕೊಂಡಿದ್ದವರಿಗೆ ಮತ್ತು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.

ಓಟಕ್ಕೆ ಚಾಲನೆ ನೀಡಿದ ಕ್ರೋನಿಕ್‌ ಫೌಂಡೇಷನ್‌ ವ್ಯವಸ್ಥಾಪಕ ಟ್ರಸ್ಟಿ ರಮೇಶ್‌ ಶಿವಣ್ಣ, ‘ಜಾಗತಿಕ ತಾಪಮಾನ ಹೆಚ್ಚಳದಿಂದ ಮಾನವನ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಮಿತಿ ಮೀರಿದ ಪರಿಸರ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !