ಸೋಮವಾರ, ಸೆಪ್ಟೆಂಬರ್ 27, 2021
26 °C

ಹ್ಯಾರಿ- ಮೇಘನ್‌ಗೆ ಗಂಡು ಮಗು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಬ್ರಿಟನ್ ರಾಜಮನೆತನಕ್ಕೆ ನೂತನ ಅತಿಥಿಯ ಆಗಮನವಾಗಿದೆ. ರಾಜಕುಮಾರ ಹ್ಯಾರಿ ಹಾಗೂ ನಟಿ ಮೇಘನ್ ಮಾರ್ಕೆಲ್‌ ದಂಪತಿಗೆ ಸೋಮವಾರ ಗಂಡು ಮಗು ಜನಿಸಿದೆ. ಮೇಘನ್‌ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಪ್ರಿನ್ಸ್ ಹ್ಯಾರಿ ತಿಳಿಸಿದ್ದಾರೆ.

2016ರ ಜುಲೈನಲ್ಲಿ ಪ್ರಿನ್ಸ್‌ ಹ್ಯಾರಿ ಹಾಗೂ ಮೇಘನ್‌ ಭೇಟಿ ಯಾಗಿದ್ದರು. 2017 ನವೆಂಬರ್‌ನಲ್ಲಿ ನಿಶ್ಚಿತಾರ್ಥ ನಡೆದಿದ್ದ ಜೋಡಿ 2018 ಮೇನಲ್ಲಿ ವಿವಾಹವಾಗಿದ್ದರು.  

ರಾಜಮನೆತನದ ಹೊಸ ಅತಿಥಿಯ ಸ್ವಾಗತಕ್ಕೆ ಭಾರಿ ಸಿದ್ಧತೆ ನಡೆಸಲಾಗಿದೆ. ಎರಡನೇ ಎಲಿಜಬೆತ್‌, ಪ್ರಿನ್ಸ್‌ ಚಾರ್ಲ್ಸ್‌, ಪ್ರಿನ್ಸ್‌ ವಿಲಿಯಂ ಸೇರಿದಂತೆ ರಾಜಕುಟುಂಬದ ಸದಸ್ಯರಿಗೆ ವಿಷಯ ತಿಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು