ಸೋಮವಾರ, ಆಗಸ್ಟ್ 26, 2019
21 °C

ಯೆಮನ್‌ ಸೇನಾ ನೆಲೆ ಮೇಲೆ ದಾಳಿ: 19 ಸೈನಿಕರ ಸಾವು

Published:
Updated:

ಏಡನ್‌: ದಕ್ಷಿಣ ಯೆಮನ್‌ ಸೇನಾ ನೆಲೆಯ ಮೇಲೆ ಆಲ್‌ಕೈದಾ ಸಂಘಟನೆ ಶುಕ್ರವಾರ ದಾಳಿ ನಡೆಸಿ, 19 ಸೈನಿಕರನ್ನು ಹತ್ಯೆ ಮಾಡಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಅಬ್ಯಾನ್‌ ಪ್ರಾಂತ್ಯದ ಅಲ್‌–ಮಹಫಾದ್‌ ನೆಲೆಗೆ ನುಗ್ಗಿದ್ದ ಬಂದೂಕುಧಾರಿಗಳು, ಸೈನಿಕರು ಅಲ್ಲಿಗೆ ಬರುವವರೆಗೂ ಕೆಲಗಂಟೆ ಅಡಗಿದ್ದರು ಎಂದು ತಿಳಿಸಿದ್ದಾರೆ.

ಅರೇಬಿಯನ್‌ ಪರ್ಯಾಯ ದ್ವೀಪದಲ್ಲಿನ ಯೆಮನ್‌ ಮೂಲದ ಆಲ್‌ಕೈದಾ ಸಂಘಟನೆಯು ಶುಕ್ರವಾರದ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಬಂಡುಕೋರರು ಮತ್ತು ಜಿಹಾದಿ ಬಾಂಬರ್‌ಗಳಿಂದ ನಡೆದ ಮಾರಣಾಂತಿಕ ಹಲ್ಲೆಯ ಮರು ದಿನವೇ ಈ ಘಟನೆಯೂ ನಡೆದಿದೆ. ಗುರುವಾರ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ 49 ಜನ ಹತ್ಯೆಯಾಗಿದ್ದರು.

Post Comments (+)