ಲಾಲ್‌ಬಾಗ್‌ ಸಮಸ್ಯೆಗಳಿಗೆ ಶೀಘ್ರ ಪರಿಹಾರ

7
ಸಮಸ್ಯೆಗಳ ಪಟ್ಟಿ ಸಚಿವರಿಗೆ ಸಲ್ಲಿಕೆ

ಲಾಲ್‌ಬಾಗ್‌ ಸಮಸ್ಯೆಗಳಿಗೆ ಶೀಘ್ರ ಪರಿಹಾರ

Published:
Updated:
Prajavani

ಬೆಂಗಳೂರು: ‘ಲಾಲ್‌ಬಾಗ್‌ ಉದ್ಯಾನದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆಯುತ್ತೇನೆ’ ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಭರವಸೆ ನೀಡಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಚರ್ಚೆಗೆ ಬಂದ ಜನರ ಸಮಸ್ಯೆಗಳ ಕುರಿತ ವರದಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಎರಡೂ ಪತ್ರಿಕೆಗಳು ಸಾರ್ವಜನಿಕರು ಮತ್ತು ಸರ್ಕಾರದ ಮಧ್ಯೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ‘ಎಲ್ಲ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲಾಗುವುದು’ ಎಂದು ಹೇಳಿದರು.

ಉದ್ಯಾನದಲ್ಲಿಯೇ ನಡೆದ ಜನಸ್ಪಂದನದಲ್ಲಿ ನಡಿಗೆದಾರರು, ವ್ಯಾಯಾಮಕ್ಕೆ ಬರುವವರು ಶೌಚಾಲಯ, ವೈದ್ಯಕೀಯ ಸೌಲಭ್ಯ ಹಾಗೂ ಕುಡಿಯುವ ನೀರಿನ ಕೊರತೆ, ಕಸ ವಿಲೇವಾರಿ ಸಮಸ್ಯೆ, ಸಿ.ಸಿ. ಟಿ.ವಿ. ಕ್ಯಾಮೆರಾಗಳ ಅಭಾವ ಮತ್ತು ಬೀದಿನಾಯಿಗಳ ಹಾವಳಿ ಕುರಿತು ಹೆಚ್ಚಿನ ದೂರುಗಳು ಬಂದಿದ್ದವು.

‘ಹೌದು, ಶೌಚಾಲಯಗಳು ಸ್ವಚ್ಛವಾಗಿಲ್ಲ ಹಾಗೂ ದುರ್ವಾಸನೆಯಿಂದ ಕೂಡಿವೆ. ಅದು ನನ್ನ ಗಮನಕ್ಕೂ ಬಂದಿದೆ’ ಎಂದು ಸಚಿವರೇ ಹೇಳಿದರು. ‘ಅವುಗಳ ಸುಧಾರಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.

ಇದನ್ನೂ ಓದಿಪ್ರಜಾವಾಣಿಯಿಂದ ಜನಸ್ಪಂದನ ಇಂದು

‘ಪಾರ್ಕಿಂಗ್‌ ಪ್ರದೇಶದ ಬಳಿ ಜನರಿಗೆ ಕ್ಯಾಂಟೀನ್‌ ಸೌಲಭ್ಯ ಒದಗಿಸುವ ಸಂಬಂಧ ಚರ್ಚೆ ನಡೆಸಲಿದ್ದೇನೆ’ ಎಂದು ತಿಳಿಸಿದರು.

ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ ಕುಮಾರ್‌, ‘ಉದ್ಯಾನಕ್ಕೆ ನಿತ್ಯ ನಡಿಗೆ ಹಾಗೂ ವ್ಯಾಯಾಮಕ್ಕೆ ಬರುವವರನ್ನು ಒಳಗೊಂಡ ‘ಡಿಎಚ್‌ & ಪಿವಿ ಫ್ರೆಂಡ್ಸ್‌ ಆಫ್‌ ಲಾಲ್‌ಬಾಗ್‌’ ಎಂಬ ಅನೌಪಚಾರಿಕ ವೇದಿಕೆಯನ್ನು ರಚಿಸಿದ್ದೇವೆ’ ಎಂದು ಹೇಳಿದರು. ‘ವೇದಿಕೆಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !