ಕೃಷಿ ಸಚಿವರಿಂದ ರೇನ್‌ಹೌಟ್‌ ಕೇಂದ್ರ ಉದ್ಘಾಟನೆ

7

ಕೃಷಿ ಸಚಿವರಿಂದ ರೇನ್‌ಹೌಟ್‌ ಕೇಂದ್ರ ಉದ್ಘಾಟನೆ

Published:
Updated:
Prajavani

ವಿಜಯಪುರ: ನಗರ ಹೊರ ವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಆರ್‌.ವಿ.ಕೆ.ವಿ.ವೈ ಯೋಜನೆಯಡಿ ಬರ ನಿರೋಧಕ ತಳಿ ಅಭಿವೃದ್ಧಿಗಾಗಿ ನಿರ್ಮಿಸಲಾದ ರೇನ್‌ಹೌಟ್‌ ಕೇಂದ್ರವನ್ನು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಈಚೆಗೆ ಉದ್ಘಾಟಿಸಿದರು.

ನಂತರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ವಿವಿಧ ಸಂಶೋಧನಾ ತಾಕುಗಳು, ಮಣ್ಣು ಮತ್ತು ಮಳೆ ನೀರು ಸಂರಕ್ಷಣೆಗಾಗಿ ಕೃಷಿ ತಾಂತ್ರಿಕ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಬದು ನಿರ್ಮಾಣದ ಯಂತ್ರವನ್ನು ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ, ಯಂತ್ರವನ್ನು ರೈತರಿಗೆ ಅನುಕೂಲವಾಗುವಂತೆ ಸಲಹೆ ನೀಡಿ ಎಂದರು.

ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಸುಶೀಲಕುಮಾರ ಬೆಳಗಲಿ, ಸುರೇಶ ಗೊಣಸಗಿ, ವಿದ್ಯಾಧಿಕಾರಿಗಳಾದ ಡಾ.ವಿ.ಎಸ್.ಕುಲಕರ್ಣಿ, ಡಾ.ಎ.ಬಿ.ಪಾಟೀಲ, ಡಾ.ಐ.ಎಸ್.ಕಟಗೇರಿ, ಡಾ.ಎಸ್.ಬಿ.ಕಲಘಟಗಿ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಡಾ.ಬಾಲಚಂದ್ರ ನಾಯ್ಕ ನಿರೂಪಿಸಿದರು. ಡಾ.ಎಸ್‌.ಬಿ.ಕಲಘಟಗಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !