‘ಬೀಫ್’ ಟ್ವೀಟ್ ಅಳಿಸಿದ ರಾಮಚಂದ್ರ ಗುಹಾ

7

‘ಬೀಫ್’ ಟ್ವೀಟ್ ಅಳಿಸಿದ ರಾಮಚಂದ್ರ ಗುಹಾ

Published:
Updated:

ಬೆಂಗಳೂರು: ‘ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಖುಷಿಯಿಂದ ಬೀಫ್ (ದನದ ಮಾಂಸದ ಖಾದ್ಯ) ತಿನ್ನುತ್ತಿದ್ದೇನೆ’ ಎಂದು ಫೋಟೊ ಸಮೇತ ಟ್ವೀಟ್ ಮಾಡಿದ್ದ ಇತಿಹಾಸ ತಜ್ಞ ರಾಮಚಂದ್ರ ಗುಹಾ, ಭಾನುವಾರ ಆ ಟ್ವೀಟನ್ನು ಅಳಿಸಿದ್ದಾರೆ.

‘ನಾನು ಪೋಸ್ಟ್ ಮಾಡಿದ್ದ, ಗೋವಾದಲ್ಲಿ ಊಟ ಮಾಡುತ್ತಿದ್ದ ಚಿತ್ರವನ್ನು ಸದಭಿರುಚಿಯಿಂದ ಕೂಡಿಲ್ಲ ಎನ್ನುವ ಕಾರಣಕ್ಕೆ ಅಳಿಸಿಹಾಕಿದ್ದೇನೆ. ಆದಾಗ್ಯೂ, ಗೋಮಾಂಸದ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆಯ ಒತ್ತಿಹೇಳುತ್ತಿದ್ದೇನೆ. ತಮಗಿಷ್ಟವಾದ ಖಾದ್ಯವನ್ನು ಸೇವಿಸುವ, ಇಷ್ಟವಾದ ಉಡುಪುಗಳನ್ನು ಧರಿಸುವ ಹಾಗೂ ಇಷ್ಟಪಟ್ಟವರನ್ನು ಪ್ರೀತಿಸುವ ಹಕ್ಕು ಎಲ್ಲರಿಗೂ ಇದೆ ಎಂಬ ನನ್ನ ನಂಬಿಕೆಯನ್ನು ಪುನರುಚ್ಛರಿಸುತ್ತೇನೆ’ ಎಂದು ಭಾನುವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ ಬೀಫ್ ಫೋಟೊ ಹಾಕಿದ ನಂತರ ತಮಗೆ ಬೆದರಿಕೆ ಕರೆಗಳು ಬರುತ್ತಿರುವುದಾಗಿಯೂ ಹೇಳಿರುವ ಗುಹಾ, ಆ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

‘ದೆಹಲಿಯ ಸಂಜಯ್ ಎಂಬಾತ ಮನೆಯ ದೂರವಾಣಿಗೆ ಕರೆ ಮಾಡಿ ಪತ್ನಿಗೆ ಹಾಗೂ ನನಗೆ ಬೆದರಿಕೆ ಹಾಕಿದ್ದಾನೆ’ ಎಂದು ಹೇಳಿರುವ ಅವರು, ಆ ಕರೆ ಬಂದ ಸ್ವಲ್ಪ ಸಮಯದಲ್ಲೇ ಆರ್‌.ಕೆ.ಯಾದವ್ ಎಂಬುವರೂ ನನ್ನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಟ್ವೀಟ್ ಕಳುಹಿಸಿದ್ದಾರೆ’ ಎಂದೂ ಆರೋಪಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 19

  Happy
 • 0

  Amused
 • 0

  Sad
 • 1

  Frustrated
 • 10

  Angry

Comments:

0 comments

Write the first review for this !