ಗುರುವಾರ , ನವೆಂಬರ್ 21, 2019
24 °C
ಡಾ. ರೇಲಾ ಸಂಸ್ಥೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಒಂದು ತಿಂಗಳು ಮಗುವಿಗೆ ಯಶಸ್ವಿ ಯಕೃತ್ತು ಕಸಿ

Published:
Updated:
Prajavani

ಬೆಂಗಳೂರು: ಒಂದು ತಿಂಗಳ ಮಗುವಿಗೆ ಡಾ. ರೇಲಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್‌ನ ವೈದ್ಯರು ಯಶಸ್ವಿಯಾಗಿ ಯಕೃತ್ತು ಕಸಿ ಮಾಡುವ ಮೂಲಕ ಅತ್ಯಂತ ಕಿರಿಯ ವ್ಯಕ್ತಿಗೆ ಕಸಿ ಮಾಡಿದ ಸಾಧನೆ ಮಾಡಿದ್ದಾರೆ. 

ಮುಂಬೈಯ ಹೆಣ್ಣು ಶಿಶುವಿಗೆ ಒಂದು ವಾರದಲ್ಲೇ ಅನಾರೋಗ್ಯಕ್ಕೆ ಒಳಗಾಗಿ, ವಾಂತಿ ಮಾಡಿಕೊಳ್ಳುತ್ತಿತ್ತು. ಇದರಿಂದ ಆತಂಕಕ್ಕೆ ಒಳಗಾದ ಪಾಲಕರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆರಂಭದಲ್ಲಿ ಇದು ಸಾಮಾನ್ಯ ಸೋಂಕು ಎಂದು ನಿರ್ಧರಿಸಿ, ಚಿಕಿತ್ಸೆ ನೀಡಲಾಯಿತು. ಸಮಸ್ಯೆ ನಿವಾರಣೆಯಾಗದ ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚಿನ ತಪಾಸಣೆಗೆ ಒಳಪಡಿಸಿ, ಮಗುವಿನ ಪಚನಕ್ರಿಯೆಯಲ್ಲಿ ತೊಂದರೆ ಇರುವುದನ್ನು ದೃಢಪಡಿಸಿದರು.

ಮಗುವಿನ ಆರೋಗ್ಯ ಸುಧಾರಿಸುಲು ಯಕೃತ್ತು ಕಸಿಯೊಂದೇ ಪರಿಹಾರ ಎಂದು ವೈದ್ಯರು ಸೂಚಿಸಿದರು. ಇದರಿಂದಾಗಿ ಪಾಲಕರು ಮಗುವನ್ನು ಮುಂಬೈನಲ್ಲಿರುವ ಡಾ. ರೇಲಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್‌ಗೆ ಕರೆದೊಯ್ದರು. ಆಸ್ಪತ್ರೆಯ ವೈದ್ಯರು 10ಗಂಟೆಗಳ ಕಾಲ ನಿರಂತರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮಗುವಿಗೆ ಯಶಸ್ವಿಯಾಗಿ ಯಕೃತ್ತು ಕಸಿ ಮಾಡಿದರು. 

‘ಒಂದು ತಿಂಗಳ ಮಗುವಿಗೆ ಕಸಿ ಮಾಡುವುದು ಸಂಕಿರ್ಣ ಪ್ರಕ್ರಿಯೆ. ಪಾಲಕರು ಸರಿಯಾದ ಸಮಯಕ್ಕೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇಲ್ಲವಾದಲ್ಲಿ ಮಗುವಿನ ಮಿದುಳಿಗೆ ಸಹ ಹಾನಿಯಾಗುವ ಸಾಧ್ಯತೆಗಳಿದ್ದವು. ಪಚನಕ್ರಿಯೆಯಲ್ಲಿ ತೊಂದರೆ ಇರುವ ಕಾಯಿಲೆ ಮಕ್ಕಳಲ್ಲಿ ಕಾಣಿಸಿಕೊಳ್ಳುವುದು ವಿರಳ’ ಎಂದು ಸೆಂಟರ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಮೊಹ್ಮದ್ ರೇಲಾ ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)