ಬಹು ಬಗೆಯ ಕಲಾ ಕಮ್ಮಟ ‘ರೋಸ್ಸೆ’

ಬುಧವಾರ, ಮೇ 22, 2019
32 °C

ಬಹು ಬಗೆಯ ಕಲಾ ಕಮ್ಮಟ ‘ರೋಸ್ಸೆ’

Published:
Updated:
Prajavani

ಮಹಿಳೆಯರು, ಮಹಿಳೆಯರಿಗಾಗಿ, ಮಹಿಳೆಯರಿಂದ ಕಲಾ ಕಮ್ಮಟವೊಂದನ್ನು ವಿಶಿಷ್ಟವಾಗಿ ಆಯೋಜಿಸಿದ್ದಾರೆ. ಈ ವಾರಾಂತ್ಯ ನಡೆಯುವ ಈ ಕಮ್ಮಟದ ಹೆಸರು ‘ರೋಸ್ಸೆ’. ಆಯೋಜಿಸಿರುವ ಸಂಘಟನೆಯ ಹೆಸರೂ ಅದುವೇ. ಇದೇ ಶನಿವಾರ, ಕೋರಮಂಗಲದ ಹೌಸ್‌ ಆಫ್‌ ಸಬ್‌ಕಲ್ಚರ್‌– ಫಾಕ್ಸ್‌ಟ್ರಾಟ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಪ್ರದರ್ಶನ ಕಲೆ ಮತ್ತು ದೃಶ್ಯ ಕಲೆಯಲ್ಲಿ ತೊಡಗಿಸಿಕೊಂಡಿರುವ ಆಯ್ದ ಕಲಾವಿದರು ‘ರೋಸ್ಸೆ’ಯಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಅವಧಿ– ಮಧ್ಯಾಹ್ನ 3.15ರಿಂದ ರಾತ್ರಿ 7. ಗೋಷ್ಠಿ, ಸಂವಾದ, ನೂಪುರ್ ಮತ್ತು ಕಲ್ಯಾಣಿ ಅವರಿಂದ ಕಾರ್ಯಾಗಾರ ನಡೆಯಲಿದೆ.

ಹೇಳಬೇಕೆನಿಸಿದ್ದನ್ನು ತನ್ನ ಪ್ರಖರ ಕಾವ್ಯಗಳ ಮೂಲಕ ಅಭಿವ್ಯಕ್ತಿಗೊಳಿಸುವ, ಅಂತರರಾಷ್ಟ್ರೀಯ ಖ್ಯಾತಿಯ ಕವಯಿತ್ರಿ ನೂಪುರ್‌ ಸಾರಸ್ವತ್‌ ಅವರು ಈ ಕಮ್ಮಟದಲ್ಲಿ ಮಾತನಾಡುತ್ತಾರೆ. ಏಷ್ಯಾ ಮತ್ತು ಯುರೋಪ್‌ನ ಏಳು ದೇಶಗಳ 16 ನಗರಗಳಲ್ಲಿ ನೂಪುರ್‌ ತಮ್ಮ ಕಾವ್ಯ ಮತ್ತು ಮಾತಿನ ಮೂಲಕ ವಿಚಾರ ಮಂಡಿಸಿದವರು. ರಂಗಗೀತೆ, ಸಂಗೀತ ಮತ್ತು ಭಾಷಣವನ್ನು ಒಳಗೊಂಡ ಪ್ರಸ್ತುತಿ ಅವರದಾಗಿರುತ್ತದೆ.

ಕಲ್ಯಾಣಿ ಅವರು ಮಹಿಳಾ ಹಕ್ಕುಗಳು ಮತ್ತು ಮಹಿಳಾ ಸಮಾನತೆಯನ್ನು ತಮ್ಮ ಸಂಗೀತದ ಮೂಲಕ ಪ್ರಸ್ತುತಪಡಿಸುವ ಕಲಾವಿದೆ. ‘ನಾಯ್ಸಸ್‌ ಇನ್‌ ಮೈ ಹೆಡ್‌’ ಎಂಬ ಮೊದಲ ಆಲ್ಬಂ ಅವರಿಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ. ಕೆನಡಾ ಸರ್ಕಾರ ಮತ್ತು ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮೂಲಕ ಮಹಿಳೆಯರಿಗೆ ಸಮಾನ ಹಕ್ಕುಗಳಿಗಾಗಿನ ಹೋರಾಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. 

ಕಥಕ್‌ ಮತ್ತು ಬ್ಯಾಲೆ ನೃತ್ಯ, ಜಾಸ್‌ ಸಂಗೀತ, ನೃತ್ಯ ನಿರ್ದೇಶನ, ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದಿಯಾ ನಾಯ್ಡು ‘ರೋಸ್ಸೆ’ ಕಮ್ಮಟದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಕಮ್ಮಟದಲ್ಲಿ ಪಾಲ್ಗೊಳ್ಳುವ ಮತ್ತೊಬ್ಬ ಕಲಾವಿದೆ ಶಾಲನ್‌ ಮುರಗೋಡು ದೇಶದೆಲ್ಲೆಡೆ ಚಿತ್ರಕಲೆ ಮತ್ತು ಯೋಗಾಭ್ಯಾಸದ ಕಾರ್ಯಕ್ರಮಗಳನ್ನು ನೀಡಿರುವ ಹಿರಿಯ ಕಲಾವಿದೆ.

 ರೋಸ್ಸೆ...

ಬಿಡುವಿನ ದಿನದಂದು ಆರೋಗ್ಯಪೂರ್ಣ ಚರ್ಚೆ ಅಥವಾ ಕಾರ್ಯಕ್ರಮದೊಂದಿಗೆ ಸಮಾನ ಮನಸ್ಕರ ಒಡನಾಟದಲ್ಲಿ ಕಳೆಯಲು ಅವಕಾಶ ಕಟ್ಟಿಕೊಡುವುದು ‘ರೋಸ್ಸೆ’ಯ ಉದ್ದೇಶ.

ಸಂಪರ್ಕಕ್ಕೆ: https://www.facebook.com/rossefemsocial/

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !