ವೀರಗಲ್ಲು ಸ್ಥಳಾಂತರಕ್ಕೆ ಕ್ರಮ: ಪರಮೇಶ್ವರ

7

ವೀರಗಲ್ಲು ಸ್ಥಳಾಂತರಕ್ಕೆ ಕ್ರಮ: ಪರಮೇಶ್ವರ

Published:
Updated:
Deccan Herald

ಬೆಂಗಳೂರು: ‘ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ವೀರಗಲ್ಲು ಸ್ಥಳಾಂತರಿಸುವ ಕೆಲಸ ಬಾಕಿ ಉಳಿದಿದೆ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್‌ಮೆಂಟ್‌ ಟ್ರಸ್ಟ್‌ ವತಿಯಿಂದ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1962ರ ಭಾರತ–ಚೀನಾ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು.

‘ಭಾರತ–ಚೀನಾ ಯುದ್ಧದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಧರು ವೀರಮರಣ ಹೊಂದಿದ್ದಾರೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಪ್ರತಿದಿನ ಗಡಿ ಕಾಯುವ ಯೋಧರನ್ನೂ ನಾವು ಇಲ್ಲಿ ಸ್ಮರಿಸಬೇಕು’ ಎಂದು ಹೇಳಿದರು.

‘ಹುತಾತ್ಮ ಯೋಧರ ಸ್ಮರಣೆಗೆಂದೇ ನಗರದಲ್ಲಿ ಸ್ಮಾರಕ ಉದ್ಯಾನ ನಿರ್ಮಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ₹1 ಕೋಟಿ ನೀಡಿದೆ. ನಿರ್ವಹಣೆಗಾಗಿ ₹35 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ಹುತಾತ್ಮರಾದ ಯೋಧರ ಕುಟುಂಬದವರು, ನಿವೃತ್ತ ಏರ್‌ ಕಮಾಂಡರ್‌ ಎಂ.ಕೆ.ಚಂದ್ರಶೇಖರ್‌, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಯ ನಿರ್ದೇಶಕ ಎಸ್‌.ಬಿ.ಸಜ್ಜನ್‌ ಅವರು ಪುಪ್ಪ ನಮನ ಅರ್ಪಿಸಿದರು. ಪ್ಯಾರಾ ರೆಜಿಮೆಂಟ್‌, ಸೆಂಟ್ರಲ್‌ ಕಮಾಂಡೆಂಟ್ಸ್‌ ಸೇರಿದಂತೆ ರಕ್ಷಣಾ ಪಡೆ ಯೋಧರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !