ಮಳೆ ನೀರು ಸಂಗ್ರಹಿಸಿ ವೀರೇಂದ್ರ ಹೆಗ್ಗಡೆ

ಬುಧವಾರ, ಜೂಲೈ 17, 2019
29 °C

ಮಳೆ ನೀರು ಸಂಗ್ರಹಿಸಿ ವೀರೇಂದ್ರ ಹೆಗ್ಗಡೆ

Published:
Updated:
Prajavani

ದಾಬಸ್ ಪೇಟೆ: 'ನೀರಿನ ಅತಿಯಾದ ಬಳಕೆಯಿಂದ ಅಂತರ್ಜಲ ಮಟ್ಟ ಕುಸಿತವಾಗಿ ನೀರಿನ ಅಭಾವ ಉಂಟಾಗಿದೆ. ಮಳೆ ನೀರನ್ನು ಸಂಗ್ರಹ ವ್ಯವಸ್ಥೆ ಕಡ್ಡಾಯ ಮಾಡಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ನೆಲಮಂಗಲ ತಾಲ್ಲೂಕಿನ ಹುಚ್ಚೇಗೌಡನ ಪಾಳ್ಯದಲ್ಲಿ ಏರ್ಪಡಿಸಿದ್ದ ಮಳೆ ನೀರು ಸಂಗ್ರಹ ವ್ಯವಸ್ಥೆ ಮತ್ತು ತಪೋವನ ಉದ್ಘಾಟಿಸಿ ಮಾತನಾಡಿದರು. ಭೂಮಿಯ ಅಂತರ್ಜಲ ಹೆಚ್ಚಿಸಲು ಮಳೆಯೇ ಸಾಕು. ಆ ಕೆಲಸ ವೈಜ್ಞಾನಿಕವಾಗಿ ಆಗಬೇಕು. ಸರ್ಕಾರಿ ಕಚೇರಿಗಳು, ವಸತಿ ಯೋಜನೆಯ ಮನೆಗಳು ಹಾಗೂ ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ ನಿರ್ಮಾಣವಾಗುವ ಮನೆಗಳಿಗೆ ಮಳೆ ನೀರು ಸಂಗ್ರಹಿಸುವುದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಜಾರಿಗೆ ತರಬೇಕು ಎಂದರು.

ಟಿ.ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿವೇಕಾನಂದ, ‘ಯೂತ್ ಮೂವ್‌ಮೆಂಟ್, ಮುಳ್ಳಕಟ್ಟಮ್ಮ ಅಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಗ್ರಾಮದಲ್ಲಿ ನೂರಾರು ವಿವಿಧ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದರು.

ಶಾಸಕ ಶ್ರೀನಿವಾಸ ಮೂರ್ತಿ, ‘ನದಿ, ಹಳ್ಳಕೊಳ್ಳಗಳು ಹರಿಯುವ ಜಾಗದಲ್ಲಿಯೇ ಇವತ್ತು ನೀರಿನ ಸಮಸ್ಯೆ ತಲೆದೋರಿದ್ದು, ನಮ್ಮಂತಹ ಮಳೆಯಾಶ್ರಿತ ಬಯಲು ಸೀಮೆಯಲ್ಲಿ ನೀರಿನ ಅಭಾವ ಉಂಟಾಗದೆ ಇರುತ್ತದೆಯೇ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !