ಬ್ಯಾಗ್‌ ತೂಕ: ದಿಢೀರ್‌ ಶಾಲೆಗೇ ತೆರಳಿ ತಪಾಸಣೆ

ಬುಧವಾರ, ಜೂನ್ 19, 2019
31 °C

ಬ್ಯಾಗ್‌ ತೂಕ: ದಿಢೀರ್‌ ಶಾಲೆಗೇ ತೆರಳಿ ತಪಾಸಣೆ

Published:
Updated:

ಬೆಂಗಳೂರು: ಶಾಲಾ ಬ್ಯಾಗ್‌ಗಳ ಭಾರವನ್ನು ತಗ್ಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಚೆಗೆ ಆದೇಶ ನೀಡಿದ್ದು, ಆದೇಶ ಸಮರ್ಪಕವಾಗಿ ಜಾರಿಗೆ ಬರುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಹಠಾತ್‌ ತಪಾಸಣೆ ನಡೆಸಲು ಮುಂದಾಗಿದೆ.

ಕಳೆದ ವಾರವಷ್ಟೇ ಶಾಲೆಗಳು ಆರಂಭವಾಗಿದ್ದು, ಎಲೆಕ್ಟ್ರಾನಿಕ್ ತಕ್ಕಡಿಯಲ್ಲಿ ಬ್ಯಾಗ್‌ ಇಟ್ಟು ಅದನ್ನು ತೂಗುವ ಕಾರ್ಯಾಚರಣೆ ಶೀಘ್ರ ಆರಂಭವಾಗಲಿದೆ.

‘ಸರ್ಕಾರದ ಆದೇಶವನ್ನು ಎಲ್ಲ ಶಾಲೆಗಳೂ ಕಡ್ಡಾಯವಾಗಿ ಪಾಲಿಸಬೇಕು. ನಮ್ಮ ಅಧಿಕಾರಿಗಳು ಶಾಲೆಗಳಿಗೆ ಹೋಗಿ ಬ್ಯಾಗ್‌ ತೂಗುತ್ತೇವೆ, ಆದೇಶ ಪಾಲನೆಯಾಗಿದೆಯೇ ಎಂಬುದನ್ನು ಗಮನಿಸುತ್ತೇವೆ. ರಾಜ್ಯದಾದ್ಯಂತ ಈ ಕಾರ್ಯಾಚರಣೆ ನಡೆಯಲಿದೆ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರಿಣಿತರ ಸಮಿತಿಯ ವರದಿ ಮತ್ತು ಮಕ್ಕಳ ಆರೋಗ್ಯವನ್ನು ಗಮನಿಸಿ ಆಯಾ ವಯೋಮಿತಿಯ ಮಕ್ಕಳ ಬ್ಯಾಗ್‌ ಇಂತಿಷ್ಟೇ ಭಾರ ಇರಬೇಕು ಎಂದು ನಿಗದಿಪಡಿಸಿದ್ದೇವೆ. ಶಾಲೆಗಳು ನಿಯಮ ಉಲ್ಲಂಘಿಸಿದ್ದು ಸಾಬೀತಾದರೆ ಅಂತಹ ಶಾಲೆಗಳ ಮಾನ್ಯತೆ ಅಪಾಯಕ್ಕೆ ಸಿಲುಕಬಹುದು’ ಎಂದರು.

ಶಾಲಾ ಬ್ಯಾಗ್ ತೂಕ ಮಕ್ಕಳ ದೇಹ ತೂಕದ ಶೇ 10ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮದಂತೆ ಆಯಾ ವಯೋಮಿತಿಯ ಮಕ್ಕಳ ಬ್ಯಾಗ್‌ ತೂಕವನ್ನು ನಿರ್ಧರಿಸಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !