ಸ್ವಾಭಿಮಾನದ ಬದುಕು ನೀಡಿದ ಚೇತನ: ಸಚಿವ ಎಂ.ಸಿ.ಮನಗೂಳಿ

7
ಗಾಂಧಿ ಜಯಂತಿ

ಸ್ವಾಭಿಮಾನದ ಬದುಕು ನೀಡಿದ ಚೇತನ: ಸಚಿವ ಎಂ.ಸಿ.ಮನಗೂಳಿ

Published:
Updated:
Deccan Herald

ವಿಜಯಪುರ: ‘ಮಹಾತ್ಮ ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ದಾಸ್ಯದಿಂದ ನಮ್ಮನ್ನು ಬಂಧಮುಕ್ತಗೊಳಿಸಿ, ಸ್ವಂತಿಕೆಯ ಬದುಕನ್ನು ನೀಡಿದವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಅವರ 150ನೇ ಹಾಗೂ ಲಾಲ್‌ಬಹಾದ್ದೂರ್‌ ಶಾಸ್ತ್ರೀಜಿ ಜಯಂತಿಯನ್ನು ಚರಕದಲ್ಲಿ ನೂಲು ನೇಯುವ ಮೂಲಕ ಉದ್ಘಾಟಿಸಿದ ಅವರು ಮಾತನಾಡಿದರು.

‘ಒಂದು ದೇಶದ ಅಭಿವೃದ್ಧಿ ಆ ದೇಶದ ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ನೈತಿಕ ಅಭಿವೃದ್ಧಿಯು ಸಹಜವಾಗಿ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಆದ್ದರಿಂದಲೇ ಗಾಂಧಿ ರೈತರೇ ದೇಶದ ಬೆನ್ನೆಲುಬು ಎಂದು ಹೇಳಿದ್ದರು’ ಎಂದರು.

ನಗರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದಲ್ಲಿನ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಗಾಂಧಿ ಜಯಂತಿ ಆಚರಣೆಗೆ ಜಿಲ್ಲಾಡಳಿತ ಚಾಲನೆ ನೀಡಿತು.

ಗಾಯಕಿ ಸೌಮ್ಯ ಪತ್ತಾರ ಹಾಗೂ ಸಂಗಡಿಗರು ಗಾಂಧೀಜಿಯವರ ನೆಚ್ಚಿನ ವೈಷ್ಣವೋ ಭಜನೆ, ರಘುಪತಿ ರಾಘವ ರಾಜಾರಾಂ ಗೀತೆಯನ್ನು ಪ್ರಸ್ತುತಪಡಿಸಿದರು. ಶಿಕ್ಷಕ ಹುಮಾಯೂನ್‌ ಮಮದಾಪುರ ನಿರೂಪಿಸಿದರು.

ಮುಸ್ಲಿಂ ಧರ್ಮದ ಸೂಫಿ ಮೌಲಾನಾ ಜಕ್ರಿಯಾ, ಕ್ರೈಸ್ತ ಫಾದರ್ ಡಿಸೋಜಾ, ಜೈನ ಧರ್ಮದ ಎಸ್.ಡಿ.ಪಂಡಿತ್, ಬೌದ್ಧ ಧರ್ಮದ ಸೋಮಶೇಖರ ರಾಠೋಡ ಆಯಾ ಧರ್ಮದ ಪ್ರಾಮುಖ್ಯತೆ ಬೋಧಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಸಿಇಒ ವಿಕಾಸ್‌ ಕಿಶೋರ್‌ ಸುರಳಕರ್, ಮಹಾನಗರ ಪಾಲಿಕೆ ಮೇಯರ್ ಶ್ರೀದೇವಿ ಲೋಗಾಂವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !