‘ಏಕ್ ಭಾರತ ಶ್ರೇಷ್ಠ ಭಾರತ’ ಅಭಿಯಾನ; ಸಮಾರೋಪ

7

‘ಏಕ್ ಭಾರತ ಶ್ರೇಷ್ಠ ಭಾರತ’ ಅಭಿಯಾನ; ಸಮಾರೋಪ

Published:
Updated:
Prajavani

ವಿಜಯಪುರ: ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆಗೆ ಅಖಿಲ ಭಾರತ ಸೈನಿಕ ಶಾಲೆಗಳು ಸಂಘಟಿಸುತ್ತಿರುವ ‘ಏಕ್ ಭಾರತ ಶ್ರೇಷ್ಠ ಭಾರತ’ ಎಂಬ ಅಭಿಯಾನದ ಸಮಾರೋಪ ಜ.29ರಿಂದ 31ರವರೆಗೆ ಮೂರು ದಿನ ನಗರದ ಸೈನಿಕ ಶಾಲೆ ಆವರಣದಲ್ಲಿ ನಡೆಯಲಿದೆ.

ದೇಶದ ಭವ್ಯತೆಯನ್ನು ಪರಿಚಯಿಸುವ ಜತೆಗೆ ಭಾರತ ಸಂಸ್ಕೃತಿಯ ವೈಭವ ತಿಳಿಪಡಿಸುವ, ಭಾವೈಕ್ಯತೆ ಪ್ರಸಾರ ಪಡಿಸುವ ನಿಟ್ಟಿನಲ್ಲಿ ದೇಶದ ವಿವಿಧ ಕಡೆಗಳಲ್ಲಿ ವೈಭವದಿಂದ ನಡೆದಿರುವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ, ದೇಶದ ವಿವಿಧ ಭಾಗಗಳಿಂದ ನೂರಾರು ಸೈನಿಕ ಶಾಲೆಯ ಕೆಡೆಟ್‌ಗಳು ಆಗಮಿಸಿ ತಮ್ಮ ರಾಜ್ಯದ ಸಂಸ್ಕೃತಿ, ಭಾಷೆಯ ವೈಭವವನ್ನು ಹಂಚಿಕೊಳ್ಳಲಿದ್ದಾರೆ. ವಿವಿಧ ಭಾಗಗಳಿಂದ ಹಿರಿಯ ಸೈನ್ಯಾಧಿಕಾರಿಗಳು, ಅಧಿಕಾರಿಗಳು ಸಹ ಪಾಲ್ಗೊಳ್ಳಲಿದ್ದಾರೆ.

ಒಂದು ರಾಜ್ಯದ ಸೈನಿಕ ಶಾಲೆಯ ವಿದ್ಯಾರ್ಥಿಗಳು, ದೇಶದ ಇನ್ನೊಂದು ರಾಜ್ಯದ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ಈ ಕಾರ್ಯಕ್ರಮದ ವೈಶಿಷ್ಟ್ಯತೆಯಾಗಿದೆ. ಈ ಅಪೂರ್ವ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಘಟಿಸುವ ಅವಕಾಶ ವಿಜಯಪುರಕ್ಕೆ ಒದಗಿ ಬಂದಿದೆ. ಇದರ ಯಶಸ್ಸಿಗಾಗಿ ಸೈನಿಕ ಶಾಲೆ ಸಂಕಲ್ಪ ಮಾಡಿದ್ದು, ಅರ್ಥಪೂರ್ಣವಾಗಿ ಸಂಘಟಿಸುವ ಉದ್ದೇಶದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಸೈನಿಕ ಶಾಲೆಯ ಉಪಪ್ರಾಚಾರ್ಯರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !