ಸಿರಿ ಧಾನ್ಯ ನಡಿಗೆ; ಜನರಿಗೆ ಅರಿವು

7

ಸಿರಿ ಧಾನ್ಯ ನಡಿಗೆ; ಜನರಿಗೆ ಅರಿವು

Published:
Updated:
Prajavani

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಸಿರಿ ಧಾನ್ಯ ಮೇಳದ ಅಂಗವಾಗಿ ಹಮ್ಮಿಕೊಂಡಿದ್ದ ಸಿರಿ ಧಾನ್ಯ ನಡಿಗೆಗೆ ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ ಶುಕ್ರವಾರ ಚಾಲನೆ ನೀಡಿದರು.

ನಗರದ ಆರಾಧ್ಯದೈವ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಸಿರಿ ಧಾನ್ಯ ನಡಿಗೆ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದವರೆಗೆ ಸಂಚರಿಸಿತು. ಈ ಸಂದರ್ಭ ಸಾರ್ವಜನಿಕರಿಗೆ ಸಿರಿ ಧಾನ್ಯದ ಮಹತ್ವ ಕುರಿತು ಅರಿವು ಮೂಡಿಸಿತು.

ನಡಿಗೆಯಲ್ಲಿ ಪಾಲ್ಗೊಂಡಿದ್ದವರ ಕೈಯಲ್ಲಿನ ಫಲಕಗಳಲ್ಲಿ ‘ಬರಗ ಇದ್ದರೆ ಬರಗಾಲದಲ್ಲಿಯೂ ಬದುಕು, ರಾಗಿ ತಿಂದವರು ಯೋಗಿಯಾಗುವರು, ಜೋಳ ತಿಂದವರು ಬಲಿಷ್ಠವಾಗುವರು, ಕೊರಲು ತಿಂದವರು ಕೊರಗೊದು ಬಿಡಿ, ಸಜ್ಜೆ ತಿಂದವರು ಉತ್ಸಾಹದ ಕಹಳೆ ಊದುವರು, ಹಾರಕ ತಿಂದವರು ಹಾರಾಡುವರು’ ಎಂಬ ಸಂದೇಶಗಳು ಸಿರಿ ಧಾನ್ಯಗಳ ಮಹತ್ವ ಸಾರಿದವು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋದ್ಧಾರ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !