ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ

7

ತನುಶ್ರೀ ಬೆಂಬಲಕ್ಕೆ ಸೋಹಾ, ನೇಹಾ

Published:
Updated:

ಭಾರತದಲ್ಲಿ ಮಹಿಳೆಯೊಬ್ಬಳು ಬದುಕುವುದು ಕಷ್ಟ ಎಂದು ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಅಭಿಪ್ರಾಯಪಟ್ಟಿದ್ದಾರೆ. ನಟಿ ತನುಶ್ರೀ ದತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ‘Metoo' ಅಭಿಯಾನಕ್ಕೆ ಬೆಂಬಲ ಸೂಚಿಸಿ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ಮಹಿಳೆಯರು ಈಗಲಾದರೂ ತಮ್ಮ ಮೇಲೆ ನಡೆದಿರುವ ದೌರ್ಜನ್ಯಗಳ ಕುರಿತು ಮಾತನಾಡಲು ಮುಂದಾಗಿರುವುದು ಸಂತಸಕರ ಸಂಗತಿ. ಭಾರತದಲ್ಲಿ ಮಹಿಳೆಯಾಗಿ ಬದುಕು ನಡೆಸುವುದು ಕಷ್ಟ. ನಿತ್ಯವೂ ಅವಳ ಮೇಲೆ ದೌರ್ಜನ್ಯದ ಪ್ರಕರಣಗಳು ನಡೆಯುತ್ತಿರುತ್ತವೆ’ ಎಂದು ಸೋಹಾ ಹೇಳಿದ್ದಾರೆ.

‘ತಮ್ಮ ಮೇಲಿನ ದೌರ್ಜನ್ಯಗಳ ಕುರಿತು ಮಹಿಳೆಯರು ಮಾತನಾಡಲು ಮುಂದಾಗಿರುವುದು ನಿಜಕ್ಕೂ ಧೈರ್ಯದ ಕೆಲಸ. ಇಂಥ ಸಂಗತಿಗಳನ್ನು ಮಾತನಾಡಲು ನಾವು ಮಹಿಳೆಯರಿಗೆ ಬೆಂಬಲ ನೀಡಬೇಕು. ಯಾರಾದರೂ ಇಂಥ ಸಂಗತಿಗಳನ್ನು ಹಂಚಿಕೊಳ್ಳಲು ಮುಂದೆ ಬಂದರೆ, ನಾನಂತೂ ಅವರ ಪರವಾಗಿ ಸದಾ ನಿಲ್ಲುತ್ತೇನೆ’ ಎಂದೂ ಅವರು ಬೆಂಬಲಿಸಿ ಮಾತನಾಡಿದ್ದಾರೆ.

ಸೋಹಾ ಅಲಿ ಮಾತಿಗೆ ದನಿಗೂಡಿಸಿರುವ ಮತ್ತೊಬ್ಬ ನಟಿ ನೇಹಾ ಧೂಪಿಯಾ ‘ನಟಿಯಾಗಿ ಅಲ್ಲ, ಆದರೆ, ಒಬ್ಬ ಮಹಿಳೆಯಾಗಿ ಈ ಪ್ರಕರಣದ ಬಗ್ಗೆ ಓದಿದಾಗ, ಕೇಳಿದಾಗ ನನ್ನಲ್ಲಿ ಆಕ್ರೋಶ ಮೂಡಿತು’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !