ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯವಸ್ಥೆಗೆ ತೊಂದರೆ ಇಲ್ಲ

ಟ್ಯಾಕ್ಸಿ ಸೇವೆ ಆತಂಕ ತರವೇ?
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಟ್ಯಾಕ್ಸಿಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಮತ್ತು ಸುರಕ್ಷತೆ ಒದಗಿಸುವಲ್ಲಿ ಪೊಲೀಸ್‌ ಇಲಾಖೆಯ ಪಾತ್ರದ ಕುರಿತು ಮೈಸೂರಿನ ಪೊಲೀಸ್‌ ಆಯುಕ್ತ ಡಾ. ಎಂ.ಎ.ಸಲೀಂ ಇಲ್ಲಿ ಚರ್ಚಿಸಿದ್ದಾರೆ.

* ಟ್ಯಾಕ್ಸಿ ಬಳಕೆ ಹೆಚ್ಚಿದ ಬಳಿಕ ಕಾನೂನು ಸುವ್ಯವಸ್ಥೆಗೆ ಹೊಸ ಸವಾಲುಗಳು ಎದುರಾಗಿವೆಯೇ?
ಅಂತಹ ದೊಡ್ಡ ಸವಾಲುಗಳು ಸೃಷ್ಟಿಯಾಗಿಲ್ಲ. ನಗರದಲ್ಲಿ ಆಟೊಗಿಂತ ಟ್ಯಾಕ್ಸಿ ಸುರಕ್ಷಿತ. ಇದು ಅಭಿವೃದ್ಧಿಯ ಸೂಚಕ ಕೂಡ. ಉತ್ತರ ಭಾರತದ ವಿವಿಧೆಡೆ ಈಗಲೂ ‘ಸೈಕಲ್‌ ಟಾಂಗಾ’ ಬಳಕೆಯಲ್ಲಿದೆ. ನಮ್ಮ ಯಾವ ನಗರಗಳಲ್ಲೂ  ಇಂತಹ ಸೈಕಲ್‌­ಗಳು ಕಾಣುವುದಿಲ್ಲ. ದಕ್ಷಿಣ ಮುಂಬೈ­ನಲ್ಲಿ ಆಟೊ ಸೇವೆಯನ್ನೇ ರದ್ದು ಮಾಡಲಾಗಿದೆ. ಅಲ್ಲಿ 50 ಸಾವಿರ ಟ್ಯಾಕ್ಸಿಗಳು ಸಂಚರಿಸು­ತ್ತಿವೆ. ವಿಶ್ವದ ಅಭಿವೃದ್ಧಿ ಹೊಂದಿದ ಎಲ್ಲ ನಗರಗಳಲ್ಲಿ ಟ್ಯಾಕ್ಸಿ ಬಳಕೆ ಇದೆ. ಇದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಿಲ್ಲ.

* ತಂತ್ರಜ್ಞಾನದ ನೆರವಿನಿಂದ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆಗೆ ಸಾಧ್ಯವಿಲ್ಲವೇ?
ಖಂಡಿತಾ ಸಾಧ್ಯ. ಜಿಪಿಎಸ್‌ ತಂತ್ರಜ್ಞಾನ, ಟ್ಯಾಕ್ಸಿಗಳ ಮೇಲ್ವಿ­ಚಾರಣೆಗೆ ನೆರವಾ­ಗಿದೆ. ಖಾಸಗಿ ಟ್ಯಾಕ್ಸಿ ವ್ಯವಸ್ಥೆ ಸಂಘಟಿತವಾಗಿ ಬೆಳೆಯದ ಮೈಸೂ­ರಿ­ನಂತಹ ನಗರದಲ್ಲಿ ಇದು ಕಷ್ಟ. ಇಲ್ಲಿ ಬಹುತೇಕ ಮಾಲೀ­ಕರೇ ಚಾಲಕರಾಗಿದ್ದಾರೆ. ನೂರಾರು ಟ್ಯಾಕ್ಸಿಗಳನ್ನು ಹೊಂದಿದ ಕಾರ್ಪೊ­ರೇಟ್‌ ಮಾದರಿ ಕಂಪೆನಿಗಳು ಬೆರಳೆಣಿಕೆ­ಯಷ್ಟಿವೆ. 50ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಹೊಂದಿದ ಸಂಸ್ಥೆಗಳಿಗೆ ಜಿಪಿಎಸ್‌ ಅಳವಡಿಕೆ ಕಡ್ಡಾಯ ಮಾಡಲಾಗಿದೆ.

* ಹೊರಗಿನಿಂದ ಬರುವ ಟ್ಯಾಕ್ಸಿಗಳ ನಿಯಂತ್ರಣ ಹೇಗೆ?
ಪ್ರವಾಸಿ ತಾಣ ಮೈಸೂರಿಗೆ ಅನೇಕರು ಟ್ಯಾಕ್ಸಿ, ಕ್ಯಾಬ್‌ಗಳ ಮೂಲ­ಕವೇ ಬರುತ್ತಾರೆ. ಅವರೆಲ್ಲ ಎಲ್ಲಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇರುವುದಿಲ್ಲ. ಅವರ ಮೇಲೆ ನಿಯಂತ್ರಣ ಸಾಧಿಸು­ವುದು ತುಸು ಕಷ್ಟ. ಸ್ಥಳೀಯ ಟ್ಯಾಕ್ಸಿಗಳ ಮೇಲೆ ಮಾತ್ರ ಈಗ ಗಮನ ಕೇಂದ್ರೀಕರಿಸಲಾಗುತ್ತಿದೆ. ಬಳಿಕ ಈ ನಿಟ್ಟಿನಲ್ಲಿ ಚಿಂತನೆ ಮಾಡುತ್ತೇವೆ.

ಬಡವಾದ ಆಟೊ!
‘ಆಟೊಗಿಂತ ಟ್ಯಾಕ್ಸಿ ಪ್ರಯಾಣ ಸೋವಿ’ ಎಂಬ ಮಾತು ನಗರಗಳಲ್ಲಿ ಜನ­ಜನಿತವಾಗುತ್ತಿದೆ. ಟ್ಯಾಕ್ಸಿಗಳ ದರ ಸಮ­ರ­­ದಿಂದಾಗಿ ಪ್ರಯಾಣ ದರ ಆಟೊ­ಗಿಂತ ಕಡಿಮೆಯಾಗಿದೆ. ಇದರಿಂದ ಆಟೊ ಉದ್ಯಮಕ್ಕೆ ಬಲವಾದ ಏಟು ಬಿದ್ದಿದ್ದು, ಮೈಸೂರಿನಲ್ಲಿ ಟ್ಯಾಕ್ಸಿ ಸೇವೆ ವಿರುದ್ಧ ಆಟೊ ಚಾಲಕರ ಅಸ­ಮಾ­ಧಾನ ಭುಗಿಲೆ­ದ್ದಿದೆ. ‘ನ್ಯಾನೊ ಟ್ಯಾಕ್ಸಿ’ ನಿಷೇಧಕ್ಕೆ ಒತ್ತಾ­ಯಿಸಿ ಹೋರಾ­ಟವೂ ಶುರುವಾಗಿದೆ.

ನಗರದಲ್ಲಿ ಸುಮಾರು 22 ಸಾವಿರ ಆಟೊಗಳು ಸಂಚರಿಸುತ್ತಿವೆ. ಆಟೊ ಪ್ರಯಾಣ ದರವನ್ನು ಕನಿಷ್ಠ  1.9 ಕಿ.ಮೀ.ಗೆ ₨ 25 ಹಾಗೂ ನಂತರದ ಪ್ರತಿ ಕಿ.ಮೀ.ಗೆ ₨ 13 ಎಂದು ಸರ್ಕಾರವೇ ನಿಗದಿ ಮಾಡಿದೆ. ಇತ್ತ ಟ್ಯಾಕ್ಸಿಗಳ ಪ್ರಯಾಣ ದರ ನಿಗದಿ­ಪಡಿಸುವ ಗೋಜಿಗೆ ಸರ್ಕಾರ ಕೈಹಾಕಿಲ್ಲ. ಹೀಗಾಗಿ, ಟ್ಯಾಕ್ಸಿಗಳ ನಡುವೆ ಅನಾ­ರೋಗ್ಯಕರ ಪೈಪೋಟಿ ಆರಂಭ­ವಾಗಿದೆ.

‘ನ್ಯಾನೊ ಟ್ಯಾಕ್ಸಿ’ ಕನಿಷ್ಠ ದರ (4 ಕಿ.ಮೀ) ₨ 70, ನಂತರದ ಪ್ರತಿ ಕಿ.ಮೀ.ಗೆ ₨ 14.5 ನಿಗದಿ ಮಾಡಿದೆ. ‘ಟ್ಯಾಕ್ಸಿ ಫಾರ್‌ ಶೂರ್‌’ನ ನಿಗದಿತ ಕನಿಷ್ಠ ದರ ₨ 49 ಹಾಗೂ ಪ್ರತಿ ಕಿ.ಮೀ.ಗೆ  ₨ 14. ‘ವೋಲಾ’ ಪ್ರತಿ ಕಿ.ಮೀ.­ಗೆ ₨ 10ಕ್ಕೆ ಸೇವೆ ಒದಗಿ­ಸುವ ಭರ­ವಸೆ ನೀಡಿ ನಗರಕ್ಕೆ ಬರಲು ಸಜ್ಜಾಗಿದೆ. ಇದ­ರಿಂದ ಜನ ‘ಟ್ಯಾಕ್ಸಿ’­ಯನ್ನು ಇಷ್ಟಪಡು­ತ್ತಿದ್ದು, ಆಟೊ ಉದ್ಯಮದಲ್ಲಿ ತಳಮಳ ಶುರುವಾಗಿದೆ.

‘ಕರ್ನಾಟಕ ಸಿಟಿ ಟ್ಯಾಕ್ಸಿ ಸೇವಾ ಕಾಯ್ದೆ–1998ರ ಪ್ರಕಾರ 1,200 ಸಿ.ಸಿ ಎಂಜಿನ್‌ ಸಾಮರ್ಥ್ಯದ ಕಾರು ಮಾತ್ರ ಟ್ಯಾಕ್ಸಿ ಸೇವೆ ನೀಡಬ­ಹುದು. ನ್ಯಾನೊ ಕೇವಲ 600 ಸಿ.ಸಿ ಎಂಜಿನ್‌ ಸಾಮ­ರ್ಥ್ಯದ ವಾಹನ. ಹೀಗಾಗಿ, ಕಾನೂನು ಪ್ರಕಾರ ಈ ವಾಹನ­ಗಳಿಗೆ ಅವಕಾಶವೇ ಇಲ್ಲ. ಅಲ್ಲದೆ, ಪ್ರಾದೇಶಿಕ ಸಾರಿಗೆ ಪ್ರಾಧಿ­ಕಾ­ರದ ಅನುಮತಿ ಪಡೆ­ಯದೇ ಸಂಚಾ­ರಕ್ಕೆ ಅವಕಾಶ ಕಲ್ಪಿಸಿ ಆಟೊ ಚಾಲಕರ ಬದು­ಕನ್ನು ದುಸ್ತರ­ ಆಗಿಸಲಾಗುತ್ತಿದೆ’ ಎಂದು ಹೇಳುತ್ತಾರೆ ಮೈಸೂರು ಆಟೊ ಚಾಲಕರ ಸಂಘ­ಗಳ ಒಕ್ಕೂಟದ ಗೌರವ ಅಧ್ಯಕ್ಷ ಎಂ.ಲಕ್ಷ್ಮಣ್‌.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT