ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕೀಯತೆ

Last Updated 8 ನವೆಂಬರ್ 2013, 19:30 IST
ಅಕ್ಷರ ಗಾತ್ರ

ರಿಯಾಲಿಟಿ ಷೋ ಮಾಡುವವರ ಧ್ಯೇಯ ಹಾಗೂ ಆಶಯಗಳ ಮೇಲೆ ಅದು ಪ್ರತಿಭೆಗೆ ವೇದಿಕೆಯೋ ಅಥವಾ ಬರೀ ಮನರಂಜನೆಯೋ ಎಂಬುದು ನಿರ್ಧಾರವಾಗುತ್ತದೆ. ಒಂದೆಡೆ ಮನೆಯೊಳಗಿನ ಚಟುವಟಿಕೆಯನ್ನು ಕಿಂಡಿಯೊಂದರಿಂದ ವೀಕ್ಷಿಸುವ ‘ಷೋ’ಗಳಿದ್ದರೆ, ಇನ್ನೊಂದೆಡೆ ಮಕ್ಕಳ ಪ್ರತಿಭೆಗೆ ವೇದಿಕೆ ನೀಡುವ ‘ಷೋ’ಗಳೂ ಇವೆ.

ಕೆಲ ವರ್ಷಗಳ ಹಿಂದೆ ‘ಸಾ ರೆ ಗಾ ಮಾ’ದಂಥ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯನ್ನು ವೀಕ್ಷಕರ ಮುಂದೆ ತೆರೆದಿಟ್ಟವು. ಆದರೆ ಇತ್ತೀಚೆಗೆ ಹಿಂದಿ ಚಾನೆಲ್ ಅಥವಾ ವಿದೇಶಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಇಂಥ ಷೋಗಳಲ್ಲಿ ಉದ್ದೇಶಪೂರ್ವಕವಾಗಿ ನಾಟಕೀಯತೆ ಸೃಷ್ಟಿಸಲಾಗುತ್ತಿದೆ. ಸ್ಪರ್ಧಿಗಳನ್ನು ತೀರ್ಪುಗಾರರು ಟೀಕಿಸುವುದು, ಅದಕ್ಕೆ ಅವರು ಅಳುವುದು... ಇದೂ ಒಂಥರ ಮನರಂಜನೆಯಾದಂತಾಗಿದೆ. ಇದರಿಂದ ವೀಕ್ಷಕರ ಅಭಿರುಚಿಯನ್ನು ಹಾಳು ಮಾಡಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT