ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮತ್ತು ಅಂದಕ್ಕೆ ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣು, ಚಂದದ ಮಾತು, ಗುಲ್‌ಮೊಹರ್
Last Updated 22 ಏಪ್ರಿಲ್ 2018, 21:01 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಉಪವಾಸ ಧರಣಿ ಕೂತವರು ಕಿತ್ತಳೆ ಹಣ್ಣಿನ ರಸ ಸೇವಿಸುವ ಮೂಲಕ ಉಪವಾಸ ಕೈಬಿಡುವುದನ್ನು ನೋಡಿರುತ್ತೀರಿ. ಕಿತ್ತಳೆ ರಸವನ್ನೇ ಕುಡಿದು ಉಪವಾಸ ಕೈಬಿಡುವ ಹಿಂದೆ ವೈಜ್ಞಾನಿಕ ಅಂಶ ಅಡಗಿದೆ. ಕಿತ್ತಳೆ ಹಣ್ಣಿನಲ್ಲಿರುವ ಸಿಟ್ರಸ್ ಅಂಶ ಹೊಟ್ಟೆಯ ಆರೋಗ್ಯಕ್ಕೆ ಹಿತಕಾರಿ. ಕಿತ್ತಳೆ ಬರೀ ಹೊಟ್ಟೆಯ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ಅಂದಕ್ಕೂ ಹಿತಕಾರಿ.

ಕಿತ್ತಳೆಯಲ್ಲಿ ಸಿಟ್ರಸ್ ಲೆಮನಾಯ್ಡ್ ಅಂಶ ಹೇರಳವಾಗಿರುವುದರಿಂದ ಚರ್ಮ, ಶ್ವಾಸಕೋಶ, ಹೊಟ್ಟೆ ಕ್ಯಾನ್ಸರ್ ದೂರವಿರಿಸುತ್ತದೆ

ಕಿಡ್ನಿ ಕಲ್ಲು ಕರಗಲು ಕಿತ್ತಳೆ ರಸ ಸಹಾಯಕ

ಕಿತ್ತಳೆ ಹಣ್ಣಿನಲ್ಲಿ ನಾರಿನಾಂಶ ಹೇರಳವಾಗಿರುವುದರಿಂದ ಮಲಬದ್ಧತೆಯನ್ನು ದೂರಮಾಡುತ್ತದೆ

ಕಿತ್ತಳೆ ಹಣ್ಣಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಇದು ಹಲ್ಲು ಮತ್ತು ಮೂಳೆಗಳನ್ನು ಸೃದಢವಾಗಿರಿಸುತ್ತದೆ

ಕಿತ್ತಳೆಯಲ್ಲಿರುವ ವಿಟಮಿನ್ ‘ಸಿ’ ಕೂದಲಿನ ಪೋಷಣೆಗೆ ಬೇಕಾದ ಕೊಲಾಜಿನ್ ವೃದ್ಧಿಗೆ ಸಹಾಯಕ, ಅಂತೆಯೇ ಕೂದಲು ಉದುರುವುದನ್ನು ತಪ್ಪಿಸುತ್ತದೆ

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಸೋಂಕು ಮತ್ತು ರೋಗಗಳಿಂದ ದೂರವಿರಿಸುವಲ್ಲಿ ಸಹಾಯಕ

ಕಿತ್ತಳೆಯಲ್ಲಿರುವ ಬೀಟಾ ಕ್ಯಾರೊಟಿನ್ ಅಂಶ ತ್ವಚೆಯ ಕೋಶಗಳನ್ನು ಹಾನಿಯಾಗುವುದನ್ನು ತಡೆಯುತ್ತದೆ. ಇದು ಕಣ್ಣಿನ ಆರೋಗ್ಯಕ್ಕೂ ಹಿತಕಾರಿ

ಹಲ್ಲು ಹಳದಿಯಾಗಿದ್ದರೆ ಕಿತ್ತಳೆ ಸಿಪ್ಪೆಯಿಂದ ಮೂರು ನಿಮಿಷ ತಿಕ್ಕಿ. ಹೊಳೆಯುವ ಬಿಳಿ ಹಲ್ಲು ನಿಮ್ಮದಾಗುತ್ತದೆ

ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ನೀರಿನಲ್ಲಿ ಪೇಸ್ಟ್‌ ರೀತಿ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಪೇಸ್ಟ್ ಒಣಗಿದ ಮೇಲೆ ತಣ್ಣೀರಿನಿಂದ ಮುಖ ತೊಳೆದುಕೊಂಡಲ್ಲಿ ಹೊಳೆಯುವ ಚರ್ಮ ನಿಮ್ಮದಾಗುತ್ತದೆ

ಸ್ನಾನದ ನೀರಿನಲ್ಲಿ ಕಿತ್ತಳೆ ಸಿಪ್ಪೆ ಹಾಕಿ ಸ್ನಾನ ಮಾಡಿದರೆ ಉಲ್ಲಾಸವೆನಿಸುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT