ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಮಾನಿನಿಯರ ಮಾರುಕಟ್ಟೆ

Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ನಾಲ್ಕು ಸಾವಿರ ಮಹಿಳಾ ವ್ಯಾಪಾರಿಗಳನ್ನು ಒಂದೇ ಕಡೆ ನೋಡಬೇಕೆಂದರೆ ಮಣಿಪುರ ರಾಜಧಾನಿ ಇಂಫಾಲ್‌ಗೆ ಒಮ್ಮೆ ಭೇಟಿ ನೀಡಬೇಕು.

ಇಂಫಾಲ್‌ನಲ್ಲಿರುವ ‘ಇಮಾ ಕಯೆತಲ್’ ( ಅಮ್ಮಂದಿರ ಮಾರ್ಕೆಟ್) ಮರ್ಕೆಟ್‌ನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಅಂಗಡಿಗಳಿವೆ. ಇಲ್ಲಿನ ಪ್ರತಿಯೊಂದು ಅಂಗಡಿಯನ್ನು ಮಹಿಳೆಯರೇ ನಡೆಸುತ್ತಿದ್ದಾರೆ.

ನೂರಾರು ವರ್ಷಗಳಿಂದ ಹಿಂದೆ ಇಲ್ಲಿನ ಪುರುಷರನ್ನು ಸಾಮ್ರಾಜ್ಯ ವಿಸ್ತರಿಸುವ ಉದ್ದೇಶದಿಂದ  ಯುದ್ಧದಲ್ಲಿ ಹೋರಾಡಲು ಬಹುದೂರ ಪ್ರದೇಶಗಳಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಅವರಲ್ಲಿ ಅದೆಷ್ಟೋ ಜನ ಯುದ್ಧದಲ್ಲೇ ಅಸುನೀಗುತ್ತಿದ್ದರು. ಇನ್ನು ಕೆಲವರು ಹಲವಾರು ವರ್ಷಗಳ ನಂತರ ಹಿಂತಿರುಗುತ್ತಿದ್ದರು.

ದುಡಿದು ಹೆಂಡತಿ ಮಕ್ಕಳನ್ನು ಸಾಕಿ ಸಲುಹಬೇಕಾದ ಗಂಡ ಅಷ್ಟು ದಿನ ಹೊರಗಡೆ ಹೋದರೆ ಆಕೆಯ ಪಾಡೇನು? ಹಾಗೆಂದು ಅಲ್ಲಿನ ಮಹಿಳೆಯರು ಸುಮ್ಮನೆ ಕೈಕಟ್ಟಿಕೂರಲಿಲ್ಲ.

ಕಷ್ಟಪಟ್ಟು ದುಡಿಯಲು ಹೊಸಲು ದಾಟಿ ಹೊರಬಂದರು ಕೃಷಿ ಮಾಡಿದರು. ಬೆಳೆ ಬೆಳೆದರು. ಬೆಳೆದ   ಪದಾರ್ಥಗಳನ್ನು  ಮಾರಾಟ ಮಾಡಲು ನಿಂತರು. ಆ ಮೂಲಕ ತಮ್ಮ ಜೀವನ ಸಾಗಿಸುತ್ತಾ ಬಂದರು. ಅದನ್ನು ಮಹಿಳೆಯರು ಈಗಲೂ ಮುಂದುವರೆಸಿಕೊಂಡು  ಬಂದಿದ್ದಾರೆ.

ಹಾಗಾದರೆ ಇಲ್ಲಿನ ಪುರುಷರು ಏನೂ ಕೆಲಸ ಮಾಡದೇ ಸುಮ್ಮನಿದ್ದಾರೆಯೇ ಎಂದು ನಿಮಗೆ ಅನಿಸಬಹುದು.
ಹೌದು  ಅಲ್ಲಿ ಅವರಿಗೆ ಮಾಡಲು ನಿಜವಾಗಿಯೂ ಯಾವ ಕೆಲಸವೂ ಇಲ್ಲ. ಏಕೆಂದರೆ ಇಲ್ಲಿನ ಎಲ್ಲ ಕುಟುಂಬಗಳು ಹಲವು ವರ್ಷಗಳ ಹಿಂದೆಯೇ ಮಾತೃ ಪ್ರಧಾನ ಕುಟುಂಬಗಳಾಗಿ ಬದಲಾಗಿವೆ.

ಇಲ್ಲಿನ ಪುರುಷರನ್ನು ಇವರು ಹೊರಗೆ ದುಡಿಯಲೂ ಬಿಡುವುದಿಲ್ಲ. ಮನೆಯ ಕೆಲಸವನ್ನು ಮಾಡಲೂ ಹೇಳುವುದಿಲ್ಲ. ಇನ್ನು ಇಲ್ಲಿ ಅಧಿಕಾರ ನಡೆಸುವವರೆಲ್ಲಾ ಮಹಿಳೆಯರೇ. ಬಹುತೇಕ ಕಚೇರಿ, ಬ್ಯಾಂಕ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರೇ ದುಡಿಯುತ್ತಾರೆ.

ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಪುರುಷರೆಲ್ಲಾ  ಒಟ್ಟುಗೂಡಿ ಒಮ್ಮೆ  ಪ್ರತಿಭಟನೆ ಮಾಡಲು ಮುಂದಾದಾಗ, ಪೊರಕೆ, ಒನಕೆ ಕೋಲುಗಳನ್ನು ತಂದು ಪುರುಷರ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಶಮನಗೊಳಿಸಿ. ಇಲ್ಲಿ ಎಂದೆಂದಿಗೂ ಸ್ತ್ರೀ ಸಾಮ್ರಾಜ್ಯವೇ ಇರಬೇಕೆಂದು ಸ್ವಲ್ಪ ಗಟ್ಟಿಯಾಗಿಯೇ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇಲ್ಲಿ ಯಾರೇ ಆಗಲಿ ಎಷ್ಟೇ ಗಂಡುಮಕ್ಕಳನ್ನು ಹೆತ್ತರೂ ಅದು ಲೆಕ್ಕಕ್ಕೆ ಬರುವುದಿಲ್ಲ.  ಒಂದು ವೇಳೆ ಇವರಿಗೆ ಹೆಣ್ಣು ಮಗು ಜನಿಸದೇ ಹೋದಲ್ಲಿ, ಬೇರೆ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ಅವಳನ್ನೇ ಆಸ್ತಿಯ ವಾರಸುದಾರಳನ್ನಾಗಿ ಮಾಡುತ್ತಾರೆಯೇ  ಹೊರತು ಯಾವುದೇ ಕಾರಣಕ್ಕೂ ಪುರುಷ ಪ್ರಾಬಲ್ಯ ಬೆಳೆಯುವುದಕ್ಕೆ ಅವಕಾಶ ನೀಡುವುದಿಲ್ಲ.

ದೇಶದಲ್ಲಿ ಮಹಿಳೆಯರು ಅತಿ ಹೆಚ್ಚಿನ  ಅಧಿಕಾರ ಅನುಭವಿಸುತ್ತಿರುವ ಏಕೈಕ ನಗರವೊಂದಿದ್ದರೆ ಅದು ಇಂಫಾಲ್‌  ಮಾತ್ರ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT