‘ಭೂಮಿ’ ಸಿನಿಮಾದ ಯಶಸ್ಸಿನ ನಂತರ ಸಂಜಯ್ ದತ್ ಹೊಸ ಲುಕ್ನೊಂದಿಗೆ ಬಂದಿದ್ದಾರೆ. ಈವರೆಗೂ ದತ್ ಅವರ ಹಾಸ್ಯ ಪ್ರಧಾನ ಪಾತ್ರ, ಪೊಲೀಸ್, ರೊಮ್ಯಾಂಟಿಕ್ ಹೀರೊ ಮುಂತಾದ ವಿಭಿನ್ನ ಪಾತ್ರಗಳನ್ನು ಆನಂದಿಸಿದ್ದೇವೆ. ಇದೇ ಮೊದಲ ಬಾರಿಗೆ ಸಂಜಯ್ ದತ್ ನಮ್ಮ ಮುಂದೆ ‘ಒಳ್ಳೆಯ ಮಹಾರಾಜ’ ಆಗಿ ಬರಲಿದ್ದಾರೆ. ಅವರ ಮುಂದಿನ ಚಿತ್ರದ ಹೆಸರು ‘ದಿ ಗುಡ್ ಮಹಾರಾಜ’. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಸಂಜಯ್ ಅವರ ಹೊಸ ಲುಕ್ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.