ಈಗೇನಿದ್ದರೂ ಸುಲಭದಲ್ಲಿ ಕೈಗೆಟುಕುವ ಪ್ಯಾಕ್ಫುಡ್ಗಳದ್ದೇ ಕಾಲ. ಇದಕ್ಕಾಗಿಯೇ, ಆಹಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ಹಲವಾರು ಕಂಪೆನಿಗಳು ಹುಟ್ಟಿಕೊಳ್ಳುತ್ತಿವೆ. ಹೀಗಿರುವ ಪರಿಸ್ಥಿತಿಯಲ್ಲಿ ಆಹಾರದ ಬಗೆಗಿನ ಪ್ರಾಥಮಿಕ ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕಾದುದು ಅತ್ಯಗತ್ಯ.

ಪೋಷಕಾಂಶಗಳಾದ ಶರ್ಕರ ಪಿಷ್ಟ, ಎಣ್ಣೆಗಳು ಶಕ್ತಿ ಒದಗಿಸಿದರೆ, ಪ್ರೊಟೀನ್ ಭರಿತ ಆಹಾರಗಳು ದೇಹದ ಬೆಳವಣಿಗೆಗೆ ಅಗತ್ಯ. ವಿಟಮಿನ್ಗಳು (ಎ, ಡಿ, ಇ, ಕೆ, ಬಿ ಹಾಗೂ ಸಿ) ಹಾಗೂ ಖನಿಜ ಲವಣಗಳು (ಕಬ್ಬಿಣ, ಸುಣ್ಣ, ಸತು, ಗಂಧಕ, ರಂಜಕ ಇತ್ಯಾದಿ) ದೇಹಕ್ಕೆ ರಕ್ಷಣೆ ಒದಗಿಸುತ್ತವೆ.

ಧಾನ್ಯಗಳು ಹಾಗೂ ಹಣ್ಣು ತರಕಾರಿಗಳಲ್ಲಿ ಸಿಗುವ ಆ್ಯಂಟಿಯಾಕ್ಸಿಡೆಂಟ್ಗಳು ಹಾಗೂ ನಾರಿನಾಂಶ ದೇಹಕ್ಕೆ ಧಕ್ಕೆ ಒದಗಿಸಬಲ್ಲ ಕ್ಯಾನ್ಸರ್ನಂತಹ ಮಹಾಮಾರಿಗಳನ್ನೂ ಹೊಡೆದೋಡಿಸುವಲ್ಲಿ ಸೈ ಎನಿಸಿವೆ. ಅಷ್ಟೇ ಅಲ್ಲದೇ ಮಲಬದ್ಧತೆಗೂ ಇವು ರಾಮ ಬಾಣ.

ಅನಾರೋಗ್ಯಕರ ಆಹಾರ ಅಥವಾ ಜಂಕ್ ಫುಡ್ಗಳು ಬರೀ ಕ್ಯಾಲೊರಿಗಳು, ಸೋಡಿಯಂ ಹಾಗೂ ಸಂತೃಪ್ತಕೊಬ್ಬಿನ ಆಮ್ಲಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಲಘು ಪೋಷಕಾಂಶಗಳನ್ನು ಕೊಡುವುದಿಲ್ಲ.

ಇವುಗಳಲ್ಲಿ ಮುಖ್ಯವಾಗಿ ಸಕ್ಕರೆ, ಘನೀಕೃತ ಎಣ್ಣೆ ಹಾಗೂ ಉಪ್ಪುಗಳನ್ನು ಬಳಸಲಾಗಿರುತ್ತದೆ. ಅಡಿಟಿವ್ಸ್ ಹಾಗೂ ಪ್ರಿಸರ್ವೇಟಿವ್ಗಳೆನ್ನಲಾದ ಕೃತಕ ಬಣ್ಣ, ವಾಸನೆ ಹಾಗೂ ರಾಸಾಯನಿಕ ಬೆರೆಸಲಾಗಿರುತ್ತದೆ. ಇಂತಹ ಆಹಾರಗಳನ್ನು ‘ಎಂಪ್ಟಿ ಕ್ಯಾಲೊರಿ ಫುಡ್ಸ್’ ಎನ್ನಲಾಗುತ್ತದೆ. ಅಂದರೆ ಇವುಗಳು ಕ್ಯಾಲೊರಿಗಳನ್ನಲ್ಲದೇ ಬೇರೆ ಯಾವುದೇ ಪೋಷಕಾಂಶ ಕೊಡುವುದಿಲ್ಲವೆಂದು ಅರ್ಥ.

ಜಂಕ್/ಧಿಡೀರ್ ಆಹಾರಗಳನ್ನು ಸೇವಿಸಿದಾಗ ನಮಗೆ ಕ್ಯಾಲೊರಿಗಳೇನೋ ಸಿಗುತ್ತವೆ. ಆದರೆ ರೋಗಗಳ ವಿರುದ್ಧ ಹೋರಾಡಲು ಬೇಕಾದ ಇತರೆ ಅಂಶಗಳು ಸಿಗದಾಗುತ್ತವೆ. ಹೀಗಾಗಿ ಅತಿ ಬೇಗನೇ ರೋಗಗಳಿಗೆ ತುತ್ತಾಗುತ್ತೇವೆ. ಅದರಲ್ಲೂ ಬೆಳೆಯುವ ಮಕ್ಕಳಿಗೆ ಅವಶ್ಯಕ ಪೋಷಕಾಂಶಗಳ ಕೊರತೆಯುಂಟಾದಾಗ ಅವರ ಬೆಳವಣಿಗೆ ಕುಂಠಿತವಾಗುತ್ತದೆ.

ಮಕ್ಕಳ ಬೆಳವಣಿಗೆಗೆ ಪ್ರೊಟೀನ್ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಲಘು ಪೋಷಕಾಂಶಗಳು. ಮೆದುಳಿನ ಬೆಳವಣಿಗೆಗೆ ಅವಶ್ಯಕ ಅಂಶಗಳು ನಮಗೆ ಧಿಡೀರ್ ಆಹಾರಗಳಲ್ಲಿ ಸಿಗುವುದಿಲ್ಲ. ಹೀಗಾದಾಗ ಮಗುವಿನ ಶಾಲಾ ಪ್ರಗತಿ ಕಡಿಮೆಯಾಗುವುದು. ಇಳಿವಯಸ್ಸಿನವರಲ್ಲೂ ಅಲ್ಜಮೀರ್ ಹಾಗೂ ಪಾರ್ಕಿನ್ಸನ್ನಂತಹ ಕಾಯಿಲೆಗಳು ಹೆಚ್ಚಾಗುತ್ತಿರುವುದೂ ಈ ಕಾರಣಕ್ಕೆ.
ಜಂಕ್ ಫುಡ್ ಗುರುತಿಸುವುದು ಹೀಗೆ...

ಜಂಕ್ ಫುಡ್ ಖರೀದಿಗೆ ಮುನ್ನ ಅದರ ಲೇಬಲ್ ಓದುವುದನ್ನು ಮರೆಯಬೇಡಿ. ಅದರ ಮೇಲಿರುವ ನ್ಯೂಟ್ರೀಷನ್ ಲೇಬಲ್ ಆಹಾರ ಯೋಗ್ಯವೋ ಅಲ್ಲವೋ ಎಂದು ತಿಳಿಸುತ್ತದೆ.

ಪ್ರತಿ ಒಂದು ಗ್ರಾಂ ಪ್ರೊಟೀನ್/ ಸಸಾರಜನಕ ಹಾಗೂ ಶರ್ಕರ ಪಿಷ್ಟ (ಕಾರ್ಬೋಹೈಡ್ರೇಟ್) ನಾಲ್ಕು ಕಿ. ಕ್ಯಾಲೊರಿಗಳಷ್ಟು ಶಕ್ತಿ ಕೊಡುತ್ತದೆ. ಅಲ್ಲದೇ ಒಂದು ಗ್ರಾಂ.ಎಣ್ಣೆ (ಫ್ಯಾಟ್ಸ್) ಒಂಬತ್ತು ಕಿ. ಕ್ಯಾಲೊರಿ ಶಕ್ತಿ ಕೊಡುತ್ತದೆ. ಅಂದರೆ ಎಣ್ಣೆ ಪ್ರಮಾಣ ಹೆಚ್ಚಿಗೆ ಇದ್ದಷ್ಟೂ ಅದು ಕೊಡುವ ಕ್ಯಾಲೊರಿಗಳ ಪ್ರಮಾಣ ಹೆಚ್ಚೆಂದು ಅರ್ಥ.

ಲೇಬಲ್ ಮೇಲೆ ಸರ್ವಿಂಗ್ ಸೈಜ್ ನಮೂದಿಸಲಾಗಿರುತ್ತದೆ. ಉದಾ: 400ಗ್ರಾಂ.ನ ಪ್ಯಾಕೆಟ್ ನೂಡಲ್ಸ್ನ ಮೇಲೆ ಎರಡು ಸರ್ವಿಂಗ್ ಸೈಜ್ ಎಂದಿದ್ದರೆ ಅದು ಹೊಂದಿರುವ ಪೋಷಕಾಂಶಗಳ ಪಟ್ಟಿಯ ದುಪ್ಪಟ್ಟು ಪೋಷಕಾಂಶ ಹೊಂದಿದೆ ಎಂದರ್ಥ. ಆದರೆ ಎಲ್ಲರೂ ಸರ್ವಿಂಗ್ ಸೈಜ್ ಗಮನಿಸದೇ ಪೋಷಕಾಂಶಗಳ ಪಟ್ಟಿ ಇಡೀ ಪ್ಯಾಕೇಟ್ನದಾಗಿದೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ.

ಜಂಕ್ ಆಹಾರ ಗುರುತಿಸಲು ಕೆಳಗಿನ ಅಂಶಗಳನ್ನು ಗಮನಿಸಬೇಕು:
ಒಂದು ಸರ್ವಿಂಗ್ ಸೈಜ್ 200 ಕಿಲೋ ಕ್ಯಾಲೊರಿಗಿಂತ ಹೆಚ್ಚಿನ ಶಕ್ತಿಯನ್ನು ಕೊಟ್ಟರೆ ಇದನ್ನು ಜಂಕ್ ಎಂದು ತಿಳಿದುಕೊಳ್ಳಬಹುದು. 200 ಮಿ.ಗ್ರಾಂ ಗಿಂತ ಹೆಚ್ಚಿಗೆ ಪ್ರಮಾಣದ ಉಪ್ಪು (ಸೋಡಿಯಂ) ಹೊಂದಿದ್ದರೂ ಅದು ಜಂಕ್ ಫುಡ್. ಕಾರ್ಬನೀಕೃತ ಪಾನೀಯಗಳೂ, ಬೇಕರಿ ಪದಾರ್ಥಗಳೂ ಜಂಕ್ಫುಡ್ಗಳೇ.

ಆಹಾರದ ಗುಂಪುಗಳಾದ ಧಾನ್ಯಗಳು, ಕಿರುಧಾನ್ಯಗಳು, ಹಣ್ಣು ತರಕಾರಿಗಳು, ಹಾಲು-ಮೊಟ್ಟೆ-ಮೀನು-ಮಾಂಸ, ಎಣ್ಣೆ-ಸಕ್ಕರೆಗಳನ್ನು ಸರಿಯಾದ ಪ್ರಮಾಣದಲ್ಲಿ ಸಮತೋಲನವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.
ಲೇಖಕಿ ಆಹಾರ ವಿಜ್ಞಾನಿ
ಕೃಷಿ ವಿಜ್ಞಾನಕೇಂದ್ರ, ಹಗರಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.