ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಟಿರಂಗು ಜೋರಾಗಿರಲಿ

ಸೌಂದರ್ಯ
Last Updated 26 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಮನೆಯೊಳಗೂ ಹೊರಗೂ ಚಳಿಯದ್ದೇ ಕಾರುಬಾರು. ಕೆಲವರಿಗೆ ಚಳಿಗಾಲದ ಒಂದಿಷ್ಟು ತಂಪು, ಮತ್ತೊಂದಿಷ್ಟು ಬಿಸಿ ಎಂಬ ಮಿಶ್ರ ವಾತಾವರಣ ಬಹಳ ಇಷ್ಟ. ಮಧ್ಯಾಹ್ನದ ಸುಡುಬಿಸಿಲೂ ಹಿತಕರವಾಗಿರುವುದು ಚಳಿಗಾಲದಲ್ಲಿ ಮಾತ್ರವೇ ಎಂಬುದು ಇದಕ್ಕೆ ಕಾರಣ. 
 
ಬೇಸಿಗೆ ಮತ್ತು ಮಳೆಗಾಲಕ್ಕಿಂತ ಹೆಚ್ಚಾಗಿ ಕೆಲವು ಬಣ್ಣಗಳು ಚಳಿಗಾಲಕ್ಕೆ ಹೆಚ್ಚು ಹೊಂದುತ್ತವೆ. ಗಾಢ ಬಣ್ಣಗಳೇ ಚಳಿಗಾಲಕ್ಕೆ ಹೆಚ್ಚು ಸೂಕ್ತ.
 
ಮೇಕಪ್‌ ವಿಷಯಕ್ಕೆ ಬಂದರೆ ಉಳಿದೆರಡು ಋತುಗಳಲ್ಲಿ ಬಳಸಬಹುದಾದ ಪ್ರಸಾಧನಗಳು ಚಳಿಗಾಲಕ್ಕೆ ಹೊಂದುವುದಿಲ್ಲ. ಯಾಕೆಂದರೆ, ಚಳಿಗಾಲದಲ್ಲಿ ಒಣ ಮತ್ತು ಶೀತದಿಂದ ಕೂಡಿದ ವಾತಾವರಣದಿಂದಾಗಿ ಚರ್ಮ, ಕೂದಲು, ತುಟಿ ಅತಿಯಾಗಿ ಒಣಗುತ್ತದೆ, ಬಿರುಕು ಬಿಡುತ್ತದೆ. ಅವುಗಳಲ್ಲಿ ತೇವವನ್ನು ಕಾಪಾಡುವಂತಹ ಪ್ರಸಾಧನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
 
ಲಿಪ್‌ಸ್ಟಿಕ್‌ ವಿಚಾರಕ್ಕೆ ಬಂದರೆ, ಗಾಢ ಬಣ್ಣದವುಗಳೇ ಹೆಚ್ಚು ಹೊಂದುತ್ತವೆ. ಇದು ಈಗಿನ ಟ್ರೆಂಡ್‌ ಕೂಡಾ. 
 
ಬಿಳಿ, ಕೆನೆ ಬಣ್ಣ, ಕಂದು ಬಣ್ಣದ ಬಣ್ಣ ಸಂಯೋಜನೆಯ ಉಡುಗೆ ಧರಿಸಿದ್ದರೆ ತದ್ವಿರುದ್ಧ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿಕೊಂಡರೆ ಸಾರ್ವಕಾಲಿಕ ಕಾಂಬಿನೇಷನ್‌ ಅನಿಸಿಕೊಳ್ಳುತ್ತದೆ. ಕೇಸರಿ  ಇಲ್ಲವೇ ಚಾಕೊಲೇಟ್‌ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿಕೊಂಡರಂತೂ ಗೌರವದಿಂದ ಎಲ್ಲರೂ ತಿರುಗಿ ನೋಡುವಂತೆ ಮಾಡೀತು. ಆದರೆ  ತೇವಾಂಶ ಇರುವ (ಮಾಯಿಶ್ಚರೈಸಿಂಗ್‌) ಲಿಪ್‌ಸ್ಟಿಕ್‌ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.
 
ಕೋರಲ್‌ ಅಂದರೆ ಹವಳದ ಬಣ್ಣ, ಕಡು ಗುಲಾಬಿ, ಮರೂನ್‌ ಬಣ್ಣದ ಲಿಪ್‌ಸ್ಟಿಕ್‌ಗಳನ್ನು ಆಯಾ ದಿನದ ಉಡುಗೆ ತೊಡುಗೆಗೆ ಹೊಂದುವಂತೆ ಗಾಢವಾಗಿ ಇಲ್ಲವೇ ಹದವಾದ ಶೇಡ್‌ನಲ್ಲಿ ಹಚ್ಚಿಕೊಂಡು ಅದರ ಮೇಲೆ ಬೇಕಿದ್ದರೆ ತೆಳುವಾಗಿ ಮಾಯಿಶ್ಚರೈಸರ್‌ ಹಚ್ಚಿಕೊಂಡರೆ ಲಿಪ್‌ ಮೇಕಪ್‌ ಮುಗಿದಂತೆ.
 
ಇನ್ನು ಕೆಲವರು ಲೈನರ್‌ನಿಂದ ತುಟಿಗೆ  ಔಟರ್‌ ಲೈನ್‌ ಎಳೆದು ಮಾಯಿಶ್ಚರೈಸರ್‌ ಹಚ್ಚಿಕೊಂಡು ಬಿಡುತ್ತಾರೆ. ಆಯಾ ದಿನದ ಉಡುಪಿಗೆ ಹೊಂದುವಂತಹ ಲೈನರ್‌ ಆಯ್ಕೆ ಮಾಡಿಕೊಂಡು ಹೀಗೆ ಮಾಯಿಶ್ಚರೈಸರ್‌ ಹಚ್ಚಿಕೊಳ್ಳುವುದರಿಂದ      ಫ್ಯಾಷನ್‌ ಲೋಕದ ಅಪ್‌ಡೇಟೆಟ್‌ ಹೆಣ್ಣು ಎಂದು ಗುರುತಿಸಿಕೊಂಡಂತಾಗುತ್ತದೆ.
 
ವಿಶೇಷವಾಗಿ ತಿಳಿ ಛಾಯೆಯ ಉಡುಪು ಧರಿಸಿ ತೂಕದ ಅಥವಾ ಹೆಚ್ಚು ವಿನ್ಯಾಸವುಳ್ಳ ಕಿವಿಯೋಲೆ ಧರಿಸಿದಾಗ ಹೀಗೆ ಲೈನರ್‌ ಮತ್ತು ಮಾಯಿಶ್ಚರೈಸರ್‌ನಿಂದ ತುಟಿಯ ಮೇಕಪ್‌ ಮಾಡಿಕೊಂಡರೆ ಉಡುಗೆ ತೊಡುಗೆಯೊಂದಿಗೆ ಮೇಕಪ್ಪನ್ನೂ ತೂಗಿಸಿಕೊಂಡಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT