ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಲಾ ಸಿಲ್ಕ್ಸ್‌ನಿಂದ ಭರ್ಜರಿ ರಿಯಾಯಿತಿ

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹಬ್ಬ, ಮದುವೆಯಂತಹ ಶುಭ ಸಮಾರಂಭಗಳಿಗೆ ಬೇಕಾದ ಪರಿಶುದ್ಧ ರೇಷ್ಮೆ ಸೀರೆಗಳಿಗೆ `ಶಾಂತಲಾ ಸಿಲ್ಕ್' ಹೇಳಿ ಮಾಡಿಸಿದ ಸ್ಥಳ. ನೇಯ್ಗೆ ಪರಂಪರೆಗೆ ಹೆಸರುವಾಸಿಯಾದ ಶಾಂತಲಾ ಸಿಲ್ಕ್‌ನಲ್ಲಿ ಅಪ್ಪಟ ಮಗ್ಗದ ರೇಷ್ಮೆ ಸೀರೆಗಳ ದೊಡ್ಡ ಸಂಗ್ರಹವಿದೆ. ಶಾಂತಲಾ ಸಿಲ್ಕ್ಸ್ ಈಗ ತನ್ನ ಗ್ರಾಹಕರನ್ನು ಸಂತೋಷಪಡಿಸುವ ಸಲುವಾಗಿ ರೇಷ್ಮೆ ಸೀರೆಗಳ ಮೇಲೆ ಶೇ 50ರವರೆಗಿನ ರಿಯಾಯಿತಿ ಪ್ರಕಟಿಸಿದೆ.

ಕಳೆದ 50 ವರ್ಷಗಳಿಂದ ಗ್ರಾಹಕರಿಗೆ ಪರಿಶುದ್ಧ ರೇಷ್ಮೆ ಸೀರೆಗಳನ್ನು ತಲುಪಿಸುವಲ್ಲಿ ಖ್ಯಾತಿಯಾಗಿರುವ ಈ ಮಳಿಗೆಯು ಮಹಿಳೆಯರ ಮನಗೆದ್ದಿದೆ. ಸಿಲ್ಕ್‌ಮಾರ್ಕ್ ಸದಸ್ಯತ್ವ ಹೊಂದಿರುವ ಶಾಂತಲಾ ಸಿಲ್ಕ್ ತನ್ನ ಗ್ರಾಹಕರಿಗೆ ಸದಾ ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಸೀರೆಗಳನ್ನೇ ಒದಗಿಸುತ್ತಾ ಬಂದಿದೆ. ಇಲ್ಲಿರುವ ಉತ್ತಮ ಕಲೆ ಹಾಗೂ ಕಸೂತಿಯಿಂದ ಕಂಗೊಳಿಸುತ್ತಿರುವ ರೇಷ್ಮೆ ಸೀರೆಗಳನ್ನು ಕಣ್ತುಂಬಿಕೊಳ್ಳುವುದೇ ಸಡಗರವಂತೆ.

ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಸರಬರಾಜಿನಿಂದ ಎಲ್ಲೆಡೆ ಖ್ಯಾತಿ ಪಡೆದಿರುವ ಶಾಂತಲಾ ಸಿಲ್ಕ್ ದೇಶದ ನಾಲ್ಕನೇ ಅತಿದೊಡ್ಡ ರಪ್ತು ಮಳಿಗೆ ಎಂಬ ಅಗ್ಗಳಿಕೆಯನ್ನು ಹೊಂದಿದೆ. ನಿಮ್ಮ ಮನೆಯಲ್ಲೂ ಶುಭ ಸಮಾರಂಭಗಳ ತಯಾರಿ ನಡೆದಿದ್ದರೆ ಶಾಂತಾಲಾ ಸಿಲ್ಕ್‌ಗೆ ಬಂದು ಮಗ್ಗದ ರೇಷ್ಮೆ ಸೀರೆಗಳನ್ನು ಕೊಂಡು ಸಂಭ್ರಮವನ್ನು ಇಮ್ಮಡಿಗೊಳಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ಸ್ಥಳ: ಯುಟಿಲಿಟಿ ಬಿಲ್ಡಿಂಗ್, ಎಂ.ಜಿ.ರಸ್ತೆ. ಮಾಹಿತಿಗೆ: 2287 2783, 4203 5567. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT