ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಸಿಂಧು ಚಾರಿತ್ರಿಕ ಸಾಧನೆ

ಚಿನ್ನಕ್ಕಾಗಿ ಸ್ಪೇನ್‌ನ ಕೆರೋಲಿನ್‌ ಜೊತೆಗೆ ಇಂದು ಪೈಪೋಟಿ * ಕುಸ್ತಿಯಲ್ಲಿ ಕಂಚು ಗೆದ್ದ ಸಾಕ್ಷಿ
Last Updated 18 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ರಿಯೊ ಡಿ ಜನೈರೊ: ಭಾರತದ ಇಬ್ಬರು ವನಿತೆಯರು  ರಿಯೊ ಒಲಿಂಪಿಕ್ಸ್‌ನಲ್ಲಿ  ಗುರುವಾರ ಮಾಡಿದ ಐತಿಹಾಸಿಕ ಸಾಧನೆಗಳ ಸಡಗರದಲ್ಲಿ ಇಡೀ ದೇಶ ಮುಳುಗೆದ್ದಿತು.

ವನಿತೆಯರ ಬ್ಯಾಡ್ಮಿಂಟನ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟ ಪಿ.ವಿ. ಸಿಂಧು ಚಿನ್ನದ  ಆಸೆ ಚಿಗುರಿಸಿದರು.  ಫ್ರೀಸ್ಟೈಲ್  ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕದ ಕಾಣಿಕೆ ನೀಡಿದರು. ಬ್ಯಾಡ್ಮಿಂಟನ್ ಸೆಮಿಫೈನಲ್‌ನಲ್ಲಿ  ಪಿ.ವಿ. ಸಿಂಧು 21–19, 21–10ರಿಂದ ಜಪಾನ್‌ನ ನೊಜುಮಿ ಒಕುಹರಾ ಅವರನ್ನು  ನೇರ ಸೆಟ್‌ಗಳಲ್ಲಿ ಸೋಲಿಸಿದರು. 

ಫೈನಲ್ ಪ್ರವೇಶಿಸಿದ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.  2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಅವರು ಸೆಮಿಫೈನಲ್ ಪ್ರವೇಶಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಕಳೆದೆ 11 ದಿನಗಳಿಂದ ನಿರಾಸೆ ಅನುಭವಿಸಿದ್ದ ಭಾರತಕ್ಕೆ ಮೊದಲ ಪದಕದ ಕಾಣಿಕೆ ಕೊಟ್ಟವರು ಸಾಕ್ಷಿ ಮಲಿಕ್. ಫ್ರೀಸ್ಟೈಲ್‌ ಕುಸ್ತಿಯ 58 ಕೆಜಿ ವಿಭಾಗದ ರೆಪೆಜೆಚ್‌ನಲ್ಲಿ ಹರಿಯಾಣದ ಸಾಕ್ಷಿ 8–5ರಿಂದ ಕಿರ್ಗಿಸ್ತಾನದ ಟೈನಿಬೆಕೊವಾ ಐಸುಲು ಅವರನ್ನು ಸೋಲಿಸಿದರು.  ಒಲಿಂಪಿಕ್ಸ್‌ ಕುಸ್ತಿಯಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಮೊದಲ ವನಿತೆ  ಎನಿಸಿದರು.

ಬಾಲ್ಯದಿಂದಲೂ ವಿಮಾನದಲ್ಲಿ ಪ್ರಯಾಣಿಸುವ ಆಸೆಯಿತ್ತು. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಲು  ವಿಮಾನದಲ್ಲಿ ಕರೆದುಕೊಂಡು ಹೋಗುತ್ತಾರೆ ಎಂದು ತಿಳಿದ ಮೇಲೆ ಕ್ರೀಡಾಪಟುವಾದೆ.
-ಸಾಕ್ಷಿ ಮಲಿಕ್, ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು


* ಒಲಿಂಪಿಕ್ಸ್‌ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ವನಿತೆ
* ಒಲಿಂಪಿಕ್ಸ್‌ ಕುಸ್ತಿಯಲ್ಲಿ ಭಾರತಕ್ಕೆ ಪದಕ ಗೆದ್ದ ದೇಶದ ನಾಲ್ಕನೇ ಕ್ರೀಡಾಪಟು

ಇಂದು ಫೈನಲ್
ಪಿ.ವಿ. ಸಿಂಧು (ಭಾರತ) ವಿರುದ್ಧ  ಕ್ಯಾರೊಲಿನಾ ಮರಿನ್ (ಸ್ಪೇನ್)
ಶುಕ್ರವಾರ: ಸಂಜೆ ಸುಮಾರು 7.30 (ಭಾರತೀಯ ಕಾಲಮಾನ) 
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT