ಬಾಬರ್ ಶತಕ ಸಂಭ್ರಮ

ಗುರುವಾರ , ಜೂನ್ 27, 2019
29 °C

ಬಾಬರ್ ಶತಕ ಸಂಭ್ರಮ

Published:
Updated:
Prajavani

ಬ್ರಿಸ್ಟಲ್: ಬಾಬರ್ ಅಜಂ (112; 108ಎಸೆತ, 10ಬೌಂಡರಿ, 2ಸಿಕ್ಸರ್) ಅವರ ಅಬ್ಬರದ ಶತಕ ವ್ಯರ್ಥವಾಯಿತು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಅಫ್ಗಾನಿಸ್ತಾನ ಮೂರು ವಿಕೆಟ್‌ಗಳಿಂದ ಮಣಿಸಿತು.

ಶುಕ್ರವಾರ ಬ್ರಿಸ್ಟಲ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ  ಪಾಕ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 47.5 ಓವರ್‌ಗಳಲ್ಲಿ 262 ರನ್‌ ಪೇರಿಸಿತು. ಬಾಬರ್ ಆಜಂ ಅವರನ್ನು ಹೊರತು ಪಡಿಸಿದರೆ ಶೋಯಬ್ ಮಲಿಕ್ (44; 59 ಎ, 1ಸಿ, 4 ಬೌಂ) ಮಾತ್ರ ಮಿಂಚಿದರು.

ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ 49.4 ಓವರ್‌ಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಮೊದಲ ವಿಕೆಟ್‌ಗೆ ಮೊಹಮ್ಮದ್ ಶೆಹಜಾದ್ ಮತ್ತು ಹಜ್ರತ್ ಉಲ್ಲಾ ಜಜಾರಿ 80 ರನ್‌ಗಳನ್ನು ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದ ಹಶ್ಮತ್ ಉಲ್ಲಾ ಶಾಹಿದಿ ಅಜೇಯ ಅರ್ಧಶತಕ (74; 102 ಎ, 7 ಬೌಂ) ಗಳಿಸಿದ ಗೆಲುವಿನ ರೂವಾರಿ ಎನಿಸಿದರು.

ಸಂಕ್ಷಿಪ್ತ ಸ್ಕೋರು:

ಪಾಕಿಸ್ತಾನ: 47.5 ಓವರ್‌ಗಳಲ್ಲಿ 262 (ಇಮಾಮ್ ಉಲ್ ಹಕ್ 32, ಬಾಬರ್ ಅಜಂ 112, ಶೋಯಬ್ ಮಲಿಕ್ 44; ಮೊಹಮ್ಮದ್ ನಬಿ 46ಕ್ಕೆ3, ದೌಲತ್ ಜದ್ರಾನ್ 37ಕ್ಕೆ2, ರಶೀದ್ ಖಾನ್ 27ಕ್ಕೆ2); ಅಫ್ಗಾನಿಸ್ತಾನ: 49.4 ಓವರ್‌ಗಳಲ್ಲಿ 7ಕ್ಕೆ 263 (ಹಜರತ್ ಉಲ್ಲಾ ಜಜಾರಿ 49, ರಹಮತ್ ಶಾ 32, ಹಶ್ಮತ್ ಉಲ್ಲಾ ಶಾಹಿದಿ ಅಜೇಯ 74, ಮೊಹಮದ್ ನಬಿ 34; ವಹಾಬ್ ರಿಯಾಜ್ 46ಕ್ಕೆ3, ಇಮದ್ ವಾಸಿಂ 29ಕ್ಕೆ2). ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 3 ವಿಕೆಟ್‌ಗಳ ಜಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !