ಬೆಂಗಳೂರು: ರಾಜ್ಯ ರಣಜಿ ತಂಡಕ್ಕೆ ಸ್ಮರಣೀಯ ಗೆಲುವಿನ ಕಾಣಿಕೆ ನೀಡಿರುವ ವೇಗದ ಬೌಲರ್ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಗೆ ಗುರುವಾರ ಬರೆದಿರುವ ಪತ್ರದಲ್ಲಿ ಅವರು ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ.
ವಲ್ಚರ್ಸ್ ಕ್ರಿಕೆಟ್ ಕ್ಲಬ್‌ನ ಸದಸ್ಯರಾಗಿರುವ ಅಭಿಮನ್ಯು ರಾಷ್ಟ್ರೀಯ ತಂಡದಲ್ಲಿ ನಾಲ್ಕು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳಲ್ಲಿ ಆಡಿದ್ದಾರೆ.
ಆದರೆ ದೇಶಿ ಕ್ರಿಕೆಟ್‌ನಲ್ಲಿ ಅವರು ವಿಶಿಷ್ಟ ಛಾಪು ಮೂಡಿಸಿದ್ದಾರೆ. 103 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 338 ವಿಕೆಟ್ ಉರುಳಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಅಪೂರ್ವ ಕಾಣಿಕೆಗಳನ್ನು ನೀಡಿದ್ದು ಗರಿಷ್ಠ 89 ರನ್ ಸೇರಿದಂತೆ ಒಟ್ಟು 123 ಇನಿಂಗ್ಸ್‌ಗಳಲ್ಲಿ 1937 ರನ್ ಕಲೆ ಹಾಕಿದ್ದಾರೆ. ನಾಲ್ಕು ಅರ್ಧಶತಕ ಗಳಿಸಿದ್ದಾರೆ.
2009ರಲ್ಲಿ ಮೀರತ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಭಿಮನ್ಯು 2020ರಲ್ಲಿ ಕೋಲ್ಕತ್ತದಲ್ಲಿ ನಡೆದ ಪಶ್ಚಿಮ ಬಂಗಾಳ ಎದುರು ಕೊನೆಯ ಪಂದ್ಯ ಆಡಿದ್ದರು.
ಬೌಲಿಂಗ್‌ನಲ್ಲಿ 36 ರನ್‌ಗಳಿಗೆ ಆರು ವಿಕೆಟ್ ಅವರ ಗರಿಷ್ಠ ಸಾಧನೆಯಾಗಿದ್ದು ಪಂದ್ಯವೊಂದರಲ್ಲಿ 11 ವಿಕೆಟ್ ಉರುಳಿಸಿದ ಸಾಧನೆಯಯೊಂದಿಗೆ ಎರಡು ಬಾರಿ 10 ವಿಕೆಟ್ ಪಡೆದಿದ್ದಾರೆ. 12 ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.