14ರನ್‌ಗಳಿಗೆ ಆಲೌಟ್‌ ಆದ ಅರುಣಾಚಲ ಪ್ರದೇಶ

7

14ರನ್‌ಗಳಿಗೆ ಆಲೌಟ್‌ ಆದ ಅರುಣಾಚಲ ಪ್ರದೇಶ

Published:
Updated:

ನವದೆಹಲಿ: ಅರುಣಾಚಲ ಪ್ರದೇಶ ಮಹಿಳಾ ತಂಡದವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಶ್ರಯದ 23 ವರ್ಷದೊಳಗಿನವರ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 14ರನ್‌ಗಳಿಗೆ ಆಲೌಟ್‌ ಆಗಿದ್ದಾರೆ.

ಈ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡ 10 ವಿಕೆಟ್‌ಗಳಿಂದ ಗೆದ್ದಿದೆ.

ಮೊದಲು ಬ್ಯಾಟ್‌ ಮಾಡಿದ ಅರುಣಾಚಲ ಪ್ರದೇಶ 11 ಓವರ್‌ಗಳಲ್ಲಿ ಹೋರಾಟ ಮುಗಿಸಿತು. ಈ ತಂಡದ ಏಳು ಮಂದಿ ಆಟಗಾರ್ತಿಯರು ಶೂನ್ಯಕ್ಕೆ ಔಟಾದರು. ಹಿಮಾಚಲ ತಂಡದ ಪ್ರಾಚಿ ಯಶಸ್ವಿ ಬೌಲರ್‌ ಎನಿಸಿದರು. ಅವರು ಕೇವಲ ಒಂದು ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿದರು.

15ರನ್‌ಗಳ ಗುರಿಯನ್ನು ಹಿಮಾಚಲ ತಂಡ 1.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಮುಟ್ಟಿತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !