ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ನ್ಯೂಜಿಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನತ್ತ ಬಾಂಗ್ಲಾದೇಶ

Published 1 ಡಿಸೆಂಬರ್ 2023, 15:58 IST
Last Updated 1 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ಸಿಲೆಟ್‌: ಎಡಗೈ ಸ್ಪಿನರ್ ತೈಜುಲ್ ಇಸ್ಲಾಂ (40ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್‌ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನತ್ತ ದಾಪುಗಾಲು ಇರಿಸಿದೆ. 

ಗೆಲುವಿಗೆ 332 ರನ್‌ಗಳ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್‌, ಶುಕ್ರವಾರ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ 113 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ತಾಳ್ಮೆಯ ಆಟವಾಡಿದ ಡೇರಿಲ್‌ ಮಿಚೆಲ್ (ಔಟಾಗದೇ 44: 86ಎ) ಪಂದ್ಯವನ್ನು ಐದನೇ ದಿನಕ್ಕೆ ವಿಸ್ತರಿಸಿದರು.

ಇದಕ್ಕೆ ಮೊದಲು ಬಾಂಗ್ಲಾದೇಶದ ಎರಡನೇ ಇನಿಂಗ್ಸ್‌ ಭೋಜನವಿರಾಮದ ಒಂದು ಗಂಟೆಯ ನಂತರ 338 ರನ್‌ಗಳಿಗೆ ಕೊನೆಗೊಂಡಿತ್ತು.

ಬಾಂಗ್ಲಾದೇಶ ಜಯಶಾಲಿಯಾದರೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಗೆಲುವು ಮತ್ತು ತವರಿನಲ್ಲಿ ಮೊದಲ ಟೆಸ್ಟ್ ಗೆಲುವು ಪಡೆದಂತಾಗುತ್ತದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನ್ನಿಂಗ್ಸ್‌: ಬಾಂಗ್ಲಾದೇಶ: 310, ನ್ಯೂಜಿಲೆಂಡ್‌: 317; ಎರಡನೇ ಇನ್ನಿಂಗ್ಸ್‌: ಬಾಂಗ್ಲಾದೇಶ:100.4 ಓವರ್‌ಗಳಲ್ಲಿ 338, ನ್ಯೂಜಿಲೆಂಡ್‌: 49 ಓವರುಗಳಲ್ಲಿ 7 ವಿಕೆಟ್‌ಗಳಿಗೆ 113 (ಡೇರಿಲ್ ಮಿಚೆಲ್ ಬ್ಯಾಟಿಂಗ್ 44; ತೈಜುಲ್ ಇಸ್ಲಾಂ 40ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT