ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಬ್ಲಂಡೆಲ್ ಶತಕ, ಇಂಗ್ಲೆಂಡ್‌ಗೆ ತಕ್ಕ ಉತ್ತರ ನೀಡಿದ ನ್ಯೂಜಿಲೆಂಡ್

Last Updated 17 ಫೆಬ್ರುವರಿ 2023, 12:36 IST
ಅಕ್ಷರ ಗಾತ್ರ

ಮೌಂಟ್‌ ಮಾಂಗನೂಯಿ, ನ್ಯೂಜಿಲೆಂಡ್‌: ಟಾಮ್ ಬ್ಲಂಡೆಲ್‌ ಅವರ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಮೊದಲ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ತಕ್ಕ ಉತ್ತರ ನೀಡಿದೆ.

ಇಂಗ್ಲೆಂಡ್‌ನ ಮೊದಲ ಇನಿಂಗ್ಸ್‌ ಮೊತ್ತ 325 ರನ್‌ಗಳಿಗೆ ಉತ್ತರವಾಗಿ ಆತಿಥೇಯ ತಂಡ 306 ರನ್‌ ಗಳಿಸಿತು. ಎರಡನೇ ದಿನವಾದ ಶುಕ್ರವಾರದ ಆಟದ ಅಂತ್ಯಕ್ಕೆ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗಳಿಗೆ 79 ರನ್ ಗಳಿಸಿದ್ದು, ಒಟ್ಟು 98 ರನ್‌ಗಳಿಂದ ಮುನ್ನಡೆ ಸಾಧಿಸಿದೆ.

3 ವಿಕೆಟ್‌ಗಳಿಗೆ 37 ರನ್‌ಗಳಿಂದ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್‌ ತಂಡ 83 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ ಕಳೆದುಕೊಂಡಿತು.

ಆದರೆ ಬ್ಲಂಡೆಲ್‌ (138 ರನ್‌, 181 ಎ., 4X19, 6X1) ಸೊಗಸಾದ ಶತಕದ ಮೂಲಕ ತಂಡಕ್ಕೆ ಆಸರೆಯಾದರು. ಡೆವೊನ್‌ ಕಾನ್ವೆ (77) ಅರ್ಧಶತಕ ಗಳಿಸಿ ಮಿಂಚಿದರು.

ಬ್ಲಂಡೆಲ್‌ ಅವರು ಕಾನ್ವೆ ಜತೆಗೆ ಆರನೇ ವಿಕೆಟ್‌ಗೆ 75 ರನ್‌ ಸೇರಿಸಿದರೆ, ಸ್ಕಾಟ್‌ ಕಗೆಲೈನ್ (20) ಅವರೊಂದಿಗೆ ಎಂಟನೇ ವಿಕೆಟ್‌ಗೆ 53 ರನ್‌ ಕಲೆಹಾಕಿದರು. ಇಂಗ್ಲೆಂಡ್‌ ಪರ ಒಲಿ ರಾಬಿನ್ಸನ್‌ ನಾಲ್ಕು ಹಾಗೂ ಜೇಮ್ಸ್‌ ಆ್ಯಂಡರ್ಸನ್ ಮೂರು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌ 9 ವಿಕೆಟ್‌ಗೆ 325 ಡಿಕ್ಲೇರ್ಡ್‌. ನ್ಯೂಜಿಲೆಂಡ್‌ 82.5 ಓವರ್‌ಗಳಲ್ಲಿ 306 (ಡೆವೊನ್‌ ಕಾನ್ವೆ 77, ನೀಲ್‌ ವಾಗ್ನೆರ್‌ 27, ಟಾಮ್‌ ಬ್ಲಂಡೆಲ್‌ 138, ಒಲಿ ರಾಬಿನ್ಸನ್‌ 54ಕ್ಕೆ 4, ಜೇಮ್ಸ್‌ ಆ್ಯಂಡರ್ಸನ್ 36ಕ್ಕೆ 3) ಎರಡನೇ ಇನಿಂಗ್ಸ್‌: ಇಂಗ್ಲೆಂಡ್ 16 ಓವರ್‌ಗಳಲ್ಲಿ 2 ವಿಕೆಟ್‌ಗೆ 79 (ಜಾಕ್‌ ಕ್ರಾಲಿ 28, ಬೆನ್‌ ಡಕೆಟ್‌ 25, ಒಲಿ ಪೊಪ್ ಬ್ಯಾಟಿಂಗ್‌ 14, ಸ್ಟುವರ್ಟ್‌ ಬ್ರಾಡ್‌ ಬ್ಯಾಟಿಂಗ್‌ 6)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT