ಗುರುವಾರ , ಆಗಸ್ಟ್ 22, 2019
26 °C

ಲಂಕಾ ತಂಡಕ್ಕೆ ಮರಳಿದ ಚಾಂಡಿಮಲ್‌

Published:
Updated:
Prajavani

ಕೊಲಂಬೊ: ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯಕ್ಕೆ ಶುಕ್ರವಾರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದ್ದು ದಿನೇಶ್‌ ಚಾಂಡಿಮಲ್‌ಗೆ ಅವಕಾಶ ನೀಡಲಾಗಿದೆ.

29 ವರ್ಷದ ಚಾಂಡಿಮಲ್‌, ಈ ವರ್ಷದ ಫೆಬ್ರುವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯಲ್ಲಿ ರನ್‌ ಗಳಿಸಲು ಪರದಾಡಿದ್ದರು. ಹೀಗಾಗಿ ನಂತರದ ಸರಣಿಗಳಲ್ಲಿ ಅವರಿಗೆ ಅವಕಾಶ ನೀಡಿರಲಿಲ್ಲ. ವಿಕೆಟ್‌ ಕೀಪರ್‌ ದಿನೇಶ್‌, ಆರು ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ.

ಅನುಮಾನಾಸ್ಪದ ಬೌಲಿಂಗ್‌ ಶೈಲಿಯ ಕಾರಣ ನಿಷೇಧಕ್ಕೆ ಗುರಿಯಾಗಿದ್ದ ಅಖಿಲ ಧನಂಜಯ ಕೂಡ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಟೆಸ್ಟ್‌ ಪಂದ್ಯ ಇದೇ 14ರಿಂದ ಗಾಲ್‌ನಲ್ಲಿ  ನಡೆಯಲಿದೆ.

ತಂಡ ಇಂತಿದೆ: ದಿಮುತ್‌ ಕರುಣಾರತ್ನೆ (ನಾಯಕ), ಏಂಜೆಲೊ ಮ್ಯಾಥ್ಯೂಸ್‌, ದಿನೇಶ್‌ ಚಾಂಡಿಮಲ್‌, ಲಾಹಿರು ತಿರಿಮಾನ್ನೆ, ಕುಶಾಲ್‌ ಮೆಂಡಿಸ್‌, ಕುಶಾಲ್ ಪೆರೇರಾ, ನಿರೋಷನ್‌ ಡಿಕ್ವೆಲ್ಲಾ, ಧನಂಜಯ ಡಿಸಿಲ್ವ, ಅಖಿಲ ಧನಂಜಯ, ಲಸಿತ್‌ ಎಂಬುಲ್‌ದೆನಿಯಾ, ಸುರಂಗ ಲಕ್ಮಲ್‌, ಲಾಹಿರು ಕುಮಾರ, ಒಶಾಡ ಫರ್ನಾಂಡೊ, ಲಕ್ಷಣ್‌ ಸಂದಕನ್‌ ಮತ್ತು ವಿಶ್ವ ಫರ್ನಾಂಡೊ.

Post Comments (+)