ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್‌ ಪೂರ್ಣ ವೇಳಾಪಟ್ಟಿ ಪ್ರಕಟ: ಮೇ 19ರವರೆಗೆ ಲೀಗ್‌, 26ಕ್ಕೆ ಫೈನಲ್

Published 25 ಮಾರ್ಚ್ 2024, 15:43 IST
Last Updated 25 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಐಪಿಎಲ್‌ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಫೈನಲ್ ಮೇ 26ರಂದು ಚೆನ್ನೈನಲ್ಲಿ ನಡೆಯಲಿದೆ. ಚಿಪಾಕ್‌ನಲ್ಲೇ ಮೇ 24ರಂದು ಎರಡನೇ ಕ್ವಾಲಿಫೈರ್‌ ಪಂದ್ಯ ನಿಗದಿಯಾಗಿದೆ.

ಲೋಕಸಭಾ ಚುನಾವಣೆಯ ಮಧ್ಯದಲ್ಲೇ ಈ ಬಾರಿ ಐಪಿಎಲ್ ಕೂಡ ನಡೆಯುತ್ತಿದೆ. ಮಾರ್ಚ್‌ 22ರಂದು ಟೂರ್ನಿ ಆರಂಭವಾಗಿದೆ. ಇತರ ಎರಡು ನಿರ್ಣಾಯಕ ಪಂದ್ಯಗಳು ಅಹಮದಾಬಾದಿನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈರ್ ಮೇ 21ರಂದು ಹಾಗೂ ಎಲಿಮಿನೇಟರ್ ಪಂದ್ಯ ಮೇ 22ರಂದು ನಿಗದಿಯಾಗಿವೆ.

ಲೋಕಸಭೆ ಚುನಾವಣೆ ದಿನಾಂಕ ಮತ್ತು ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ರೂಪಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೀಗ್‌ ಪಂದ್ಯಗಳು ಮೇ 19ರವರೆಗೆ ನಡೆಯಲಿವೆ. 20ರಂದು ವಿಶ್ರಾಂತಿ ದಿನ. 21ರಂದು ಮೊದಲ ಎರಡು ಸ್ಥಾನ ಪಡೆದ ತಂಡಗಳು ಮೊದಲ ಕ್ವಾಲಿಫೈರ್‌ನಲ್ಲಿ ಆಡಲಿವೆ. ಮರುದಿನ ಎಲಿಮಿನೇಟರ್ ಪಂದ್ಯ ನಿಗದಿಯಾಗಿದೆ. 24ರಂದು ಎರಡನೆ ಕ್ವಾಲಿಫೈರ್ ಹಾಗೂ 26ರಂದು (ಭಾನುವಾರ) ಫೈನಲ್ ನಿಗದಿಯಾಗಿವೆ ಎಂದು ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡ ವಿಶಾಖಪಟ್ಟಣದಲ್ಲಿ ತನ್ನ ಮೊದಲ ಎರಡು (ಮಾರ್ಚ್‌ 31 ಮತ್ತು ಏ. 3ರಂದು) ತವರು ಪಂದ್ಯಗಳನ್ನು ಆಡಲಿದೆ. ನಂತರದ ಐದು ಪಂದ್ಯಗಳನ್ನು (ಏ. 20, 24, 27, ಮೇ 7 ಮತ್ತು 14) ತವರಿನಲ್ಲಿ ಆಡಲಿದೆ.

ದೆಹಲಿಯ ಏಳು ಸ್ಥಾನಗಳಿಗೆ ಲೋಕಸಭಾ ಚುಮಾವಣೆ ಮೇ 25ರಂದು ನಡೆಯಲಿದೆ.

ರಾಜಸ್ಥಾನ ರಾಯಲ್ಸ್ (ಆರ್‌ಆರ್‌) ತಂಡ ತನ್ನ ಕೆಲವು ಪಂದ್ಯಗಳನ್ನು ಗುವಾಹಟಿಯಲ್ಲಿ ಆಡಲಿದೆ. ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ತನ್ನ ಎರಡು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿದೆ. ಉಳಿದ ಪಂದ್ಯಗಳನ್ನು ಮುಲ್ಲನಪುರದಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣದಲ್ಲಿ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT