ಕ್ರಿಕೆಟ್: ದಕ್ಷಿಣ ಆಫ್ರಿಕಾ ‘ಎ’ ದಿಟ್ಟ ಹೋರಾಟ

7

ಕ್ರಿಕೆಟ್: ದಕ್ಷಿಣ ಆಫ್ರಿಕಾ ‘ಎ’ ದಿಟ್ಟ ಹೋರಾಟ

Published:
Updated:

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ವಿಜಯದ ಸಂಭ್ರಮ ಆಚರಿಸುವ ಕನಸಿನಲ್ಲಿದ್ದ ಭಾರತ ‘ಎ’ ತಂಡಕ್ಕೆ ದಕ್ಷಿಣ ಆಫ್ರಿಕಾ ’ಎ’ ತಂಡದ ರೂಡಿ ಸೆಕೆಂಡ್ ಮತ್ತು ಶಾನ್‌ ವಾನ್ ಬಾರ್ಗ್ ಜೋಡಿಯು ಅಡ್ಡಿಯಾಗಿದೆ. ಇವರಿಬ್ಬರ ಜಿಗುಟು ಆಟದಿಂದಾಗಿ ಪ್ರವಾಸಿ ಬಳಗವು ಸೋಲಿನಿಂದ ಪಾರಾಗುವ ಕನಸು ಕಾಣುತ್ತಿದೆ.

ಇಲ್ಲಿ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದಲ್ಲಿ ಸೋಮವಾರ ಮಧ್ಯಾಹ್ನ ಭಾರತ ಎ ತಂಡವು ಮೊದಲ ಇನಿಂಗ್ಸ್‌ನಲ್ಲಿ 338 ರನ್‌ಗಳ ಮುನ್ನಡೆ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.  ಎರಡನೇ ಇನಿಂಗ್ಸ್‌ನಲ್ಲಿ ಮಂಗಳವಾರ ಊಟದ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾತ ಎ ತಂಡವು 64.6 ಓವರ್‌ಗಳಲ್ಲಿ 5 ವಿಕಟ್‌ಗಳಿಗೆ 162 ರನ್‌ ಗಳಿಸಿದೆ.

ಸೋಮವಾರ ಎರಡನೇ ಇನಿಂಗ್ಸ್‌  ಆರಂಭಿಸಿದ್ದ ದಕ್ಷಿಣ ಆಫ್ರಿಕಾ ಬಳಗವು 4 ವಿಕೆಟ್‌ ಕಳೆದುಕೊಂಡು 99 ರನ್ ಗಳಿಸಿತ್ತು. ಕೊನೆಯ ದಿನವಾದ ಮಂಗಳವಾರ ಬೆಳಿಗ್ಗೆಯೂ ಮತ್ತೊಂದು ವಿಕೆಟ್ ಕಳೆದುಕೊಂಡಿತು. ರಜನೀಶ್ ಗುರ್ಬಾನಿ ಅವರು ಜುಬೇರ್ ಹಮ್ಜಾ (63; 138ಎಸೆತ)  ಅವರ ವಿಕೆಟ್ ಕಬಳಿಸಿದರು. 

ಅವರ ನಂತರ ಬಂದ ಬರ್ಗ್ ಅವರು ರೂಡಿ ಸೆಕೆಂಡ್ ಜೊತೆಗೂಡಿ  ನಿಧಾನವಾಗಿ ಇನಿಂಗ್ಸ್‌ ಕಟ್ಟಿದರು.  ಈ ಪಂದ್ಯದಲ್ಲಿ  ಡ್ರಾ ಸಾಧಿಸಬೇಕಾದರೆ ಪ್ರವಾಸಿ ತಂಡವು ಇಡೀ ದಿನದಾಟದಲ್ಲಿ  ಆಲೌಟ್ ಆಗದಂತೆ ನೋಡಿಕೊಳ್ಳಬೇಕು. ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ಸಿಗುತ್ತಿರುವ ಪಿಚ್‌ನಲ್ಲಿ ಸೋಲು ತಪ್ಪಿಸಿಕೊಳ್ಳುವ ಸವಾಲು ತಂಡಕ್ಕೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !