ಬುಧವಾರ, ಸೆಪ್ಟೆಂಬರ್ 28, 2022
27 °C
ಜೋಹಾನ್ಸ್‌ಬರ್ಗ್‌ ಫ್ರ್ಯಾಂಚೈಸಿಗೆ ಫಫ್ ಡುಪ್ಲೆಸಿ ಸೇರ್ಪಡೆ

ಸಿಎಸ್‌ಕೆ ಒಡೆತನದ ತಂಡಕ್ಕೆ ಆರ್‌ಸಿಬಿ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ನಾಯಕ ಫಫ್ ಡುಪ್ಲೆಸಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸಿ ಒಡೆತನದ ಜೋಹಾನ್ಸ್‌ಬರ್ಗ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಜೋಹಾನ್ಸ್‌ಬರ್ಗ್ ತಂಡವು ಹೊಸದಾಗಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಟಿ20 ಲೀಗ್ ಟೂರ್ನಿಯಲ್ಲಿ ಆಡಲಿದೆ. 2011ರಿಂದ 2021ರವರೆಗೂ ಫಫ್‌ ಡುಪ್ಲೆಸಿ  ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಈ ತಂಡವು ಇಂಗ್ಲೆಂಡ್‌ನ ಮೋಯಿನ್ ಅಲಿ ಅವರನ್ನೂ ಸೇರ್ಪಡೆ ಮಾಡಿಕೊಂಡಿದೆ ಎನ್ನಲಾಗಿದೆ. ಅಲಿ ಕೂಡ ಸದ್ಯ ಚೆನ್ನೈ ತಂಡದಲ್ಲಿದ್ದಾರೆ.

ನೂತನ ಲೀಗ್‌ನಲ್ಲಿ ಆಡಲಿರುವ ಆರು ತಂಡಗಳಿಗೂ ಆಟಗಾರರ ಆಯ್ಕೆ ಮಾಡಿಕೊಳ್ಳಲು ಬುಧವಾರ ಕೊನೆಯ ದಿನವಾಗಿತ್ತು. 2023ರ ಜನವರಿ ಹಾಗೂ ಫೆಬ್ರುವರಿಯಲ್ಲಿ ಟೂರ್ನಿಯು ಆಯೋಜನೆಗೊಂಡಿದೆ.  ಇದರಲ್ಲಿರುವ ಆರು ತಂಡಗಳನ್ನೂ ಈಚೆಗೆ ಐಪಿಎಲ್ ತಂಡಗಳ ಮಾಲೀಕರೇ ಖರೀದಿಸಿದ್ದರು. 

ಎಂಐ ಕೇಪ್‌ಟೌನ್ ತಂಡದಲ್ಲಿ ಮುಂಬೈ ಇಂಡಿಯನ್ಸ್ ಒಡೆತನ ಹೊಂದಿದೆ. ಉಳಿದಂತೆ ಡರ್ಬನ್, ಗೆಬೆರಾ, ಪಾರ್ಲ್ ಹಾಗೂ ಪ್ರಿಟೊರಿಯಾ ತಂಡಗಳನ್ನು ಕ್ರಮವಾಗಿ ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಫ್ರ್ಯಾಂಚೈಸಿಗಳು ಖರೀದಿಸಿವೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು