ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಅಥ್ಲೆಟಿಕ್ಸ್: ಹೈಜಂಪ್‌; ಚೇತನ್‌ ದಾಖಲೆ

200 ಮೀ. ಓಟದಲ್ಲಿ ರೋಹಿತ್‌ಗೆ ಚಿನ್ನ
Last Updated 4 ಅಕ್ಟೋಬರ್ 2019, 19:48 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು ನಗರ ವಿಭಾಗದ ಚೇತನ್‌ ಅವರು ದಸರಾ ಅಥ್ಲೆಟಿಕ್ ಕೂಟದ ಕೊನೆಯ ದಿನ ಪುರುಷರ ಹೈಜಂಪ್‌ನಲ್ಲಿ ನೂತನ ದಾಖಲೆಯೊಂದಿಗೆ ಚಿನ್ನ ಗೆದ್ದು ಕೊಂಡರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅವರು 2.13 ಮೀ. ಎತ್ತರ ಜಿಗಿದು ಅಗ್ರ ಸ್ಥಾನ ಪಡೆದುಕೊಂಡರಲ್ಲದೆ, ತಮ್ಮದೇ ಹೆಸರಿನಲ್ಲಿದ್ದ ದಾಖಲೆ (2.10 ಮೀ.) ಉತ್ತಮಪಡಿಸಿಕೊಂಡರು. ಬೆಂಗಳೂರು ಗ್ರಾಮಾಂತರ ವಿಭಾಗದ ಯಶಸ್‌ ಮತ್ತು ಬೆಳಗಾವಿ ವಿಭಾಗದ ನಾಗರಾಜ ಗೌಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಕೊನೆಯ ದಿನದ ಪ್ರಧಾನ ಆಕರ್ಷ ಣೆಯೆನಿಸಿದ್ದ ಪುರುಷರ ಮತ್ತು ಮಹಿಳೆ ಯರ 200 ಮೀ. ಓಟದಲ್ಲಿ ಕ್ರಮವಾಗಿ ಮೈಸೂರು ವಿಭಾಗದ ರೋಹಿತ್‌ ಮತ್ತು ಬೆಂಗಳೂರು ನಗರ ವಿಭಾಗದ ಎಂ.ಜಿ.ಪದ್ಮಿನಿ ಚಿನ್ನ ಜಯಿಸಿದರು.

ದಸರಾ ಕ್ರೀಡಾಕೂಟಕ್ಕೆ ತೆರೆ

ನಾಲ್ಕು ದಿನ ಆಯೋಜಿಸಿದ್ದ ದಸರಾ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆಬಿತ್ತು. ಅಥ್ಲೆಟಿಕ್ಸ್‌ನಲ್ಲಿ ಈ ಬಾರಿ ಒಟ್ಟು ಆರು ಕೂಟ ದಾಖಲೆಗಳು ನಿರ್ಮಾಣವಾದವು. ಈ ಬಾರಿ ಅಥ್ಲೆಟಿಕ್ಸ್‌ ಒಳಗೊಂಡಂತೆ 30 ಕ್ರೀಡೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 4,500 ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಕೊನೆಯ ದಿನ ಫಲಿತಾಂಶ: ಪುರುಷರ ವಿಭಾಗ: 200 ಮೀ. ಓಟ: ರೋಹಿತ್‌ (ಮೈಸೂರು ವಿಭಾಗ)–1, ಎಂ.ಡಿ.ಅಮರನಾಥ್‌ (ಬೆಳಗಾವಿ ವಿಭಾಗ)–2, ಮಿಥುನ್‌ ಶೆಟ್ಟಿ (ಬೆಂಗಳೂರು ನಗರ ವಿಭಾಗ)–3. ಕಾಲ: 21.06 ಸೆ.

10 ಸಾವಿರ ಮೀ. ಓಟ: ಲಕ್ಷ್ಮಣ (ಬೆಂಗಳೂರು ನಗರ)–1, ಟಿ.ಎಸ್‌.ಸಂದೀಪ್ (ಬೆಂಗಳೂರು ಗ್ರಾಮಾಂ ತರ)–2, ಪಿ.ಎಂ.ಶಿವಾಜಿ (ಬೆಳಗಾವಿ)–3. ಕಾಲ: 34 ನಿ. 34.07 ಸೆ.

4X400 ಮೀ. ರಿಲೇ: ಬೆಂಗಳೂರು ನಗರ–1, ಮೈಸೂರು–2, ಬೆಳಗಾವಿ–3. ಕಾಲ: 3 ನಿ.17.09 ಸೆ.

ಹೈಜಂಪ್‌: ಚೇತನ್‌ (ಬೆಂಗಳೂರು ನಗರ)–1, ಯಶಸ್‌ (ಬೆಂಗಳೂರು ಗ್ರಾಮಾಂತರ)–2, ನಾಗರಾಜ ಗೌಡ (ಬೆಳಗಾವಿ)–3. ಎತ್ತರ: 2.13 ಮೀ.

ಜಾವೆಲಿನ್‌ ಥ್ರೋ: ಎಂ.ಎಲ್‌.ಮನೋಜ್‌ (ಮೈಸೂರು)–1, ಶಾರುಖ್ ಟಿ. (ಬೆಳಗಾವಿ)–2, ಕೆ.ಎಸ್‌.ಕೀರ್ತಿರಾಜ್ (ಮೈಸೂರು)–3. ದೂರ: 60.19ಮೀ.

ಮಹಿಳೆಯರ ವಿಭಾಗ: 200 ಮೀ. ಓಟ: ಎಂ.ಜಿ.ಪದ್ಮಿನಿ (ಬೆಂಗಳೂರು ನಗರ)–1, ಅಪ್ಸಾನಾ ಬೇಗಂ (ಮೈಸೂರು)–2, ವಿ.ಸುಧೀಕ್ಷಾ (ಕಲಬುರ್ಗಿ)–3. ಕಾಲ: 24.06 ಸೆ. 10 ಸಾವಿರ ಮೀ. ಓಟ: ಕೆ.ಎಂ.ಅರ್ಚನಾ (ಮೈಸೂರು)–1, ಮಲ್ಲೇಶ್ವರಿ ರಾಥೋಡ್‌ (ಬೆಂಗಳೂರು ನಗರ)–2, ವಿ.ಪಿ.ರಕ್ಷಿತಾ (ಮೈಸೂರು)–3. ಕಾಲ: 41 ನಿ. 57.02 ಸೆ.

ಜಾವೆಲಿನ್ ಥ್ರೋ: ಪಾರ್ವತಿ ಎಂ.ನಾಯಕ್ (ಮೈಸೂರು)–1, ಎಂ.ಪೂಜಾ (ಮೈಸೂರು)–2, ಸ್ಟೆಸ್ಸಿ ಎಫ್‌.ಎ (ಬೆಳಗಾವಿ)–3. ದೂರ: 34.64 ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT