ರಾಂಚಿಯಲ್ಲಿ ‘ಧೋನಿ’ ಪೆವಿಲಿಯನ್‌

ಶನಿವಾರ, ಮಾರ್ಚ್ 23, 2019
24 °C

ರಾಂಚಿಯಲ್ಲಿ ‘ಧೋನಿ’ ಪೆವಿಲಿಯನ್‌

Published:
Updated:
Prajavani

ರಾಂಚಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್ ಧೋನಿ ಅವರ ಹೆಸ ರಿನ ಪೆವಿಲಿಯನ್‌ ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಅಂಗಣದಲ್ಲಿ ಸಜ್ಜಾ ಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದೇ ಎಂಟರಂದು ನಡೆಯಲಿ ರುವ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಮೊದ ಲು ಇದರ ಉದ್ಘಾಟನೆಯಾಗಲಿದೆ.

‘ಕಳೆದ ವಾರ ನಡೆದ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರ ಭಾಗದಲ್ಲಿ, ವಿಐಪಿ ಮತ್ತು ಮಾಧ್ಯಮ ಬಾಕ್ಸ್‌ಗಳು ಒಳಗೊಂಡ ಪೆವಿಲಿಯನ್‌ಗೆ, ಇಲ್ಲೇ ಆಡಿ ಬೆಳೆದ ಧೋನಿ ಹೆಸರನ್ನು ಇರಿಸಲಾಗುವುದು’ ಎಂದು ಜಾರ್ಖಂಡ್‌ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ದೇಬಶಿಶ್‌ ಚಕ್ರವರ್ತಿ ತಿಳಿಸಿದರು.

ಉದ್ಘಾಟನೆಗೆ ಒಪ್ಪದ ಧೋನಿ: ಪೆವಿಲಿಯನ್‌ ಉದ್ಘಾಟನೆ ಮಾಡುವಂತೆ ಧೋನಿ ಅವರನ್ನು ಕೋರಿಕೊಂಡಾಗ ಅವರು ಒಪ್ಪಲಿಲ್ಲ ಎಂದು ದೇಬಶಿಶ್‌ ತಿಳಿಸಿದರು.

‘ನನ್ನದೇ ಮನೆಯಲ್ಲಿ ನನ್ನ ಹೆಸರಿನ ಪೆವಿಲಿಯನ್‌ ನಾನೇ ಉದ್ಘಾಟನೆ ಮಾಡುವುದು ಸರಿಯೇ ಎಂದು ಧೋನಿ ನಮ್ಮನ್ನು ಕೇಳಿದ್ದಾರೆ. ಆದರೂ ನಾವು ಅವರನ್ನು ಮತ್ತೆ ಮತ್ತೆ ಒತ್ತಾಯಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ಶುಕ್ರವಾರ ನಡೆಯಲಿರುವ ಪಂದ್ಯ ಧೋನಿ ಪಾಲಿಗೆ ಮಹತ್ವದ್ದಾಗಿದೆ. ತವರಿನಲ್ಲಿ ಇದು ಅವರ ಕೊನೆಯ ಪಂದ್ಯ ಆಗುವ ಸಾಧ್ಯತೆ ಇದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !