ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ದಿವ್ಯಾ: ಹೆರಾನ್‌ ಜಯಭೇರಿ

ಫಾಲ್ಕನ್ ಕ್ರಿಕೆಟ್‌ ಕ್ಲಬ್ ಸುವರ್ಣ ಮಹೋತ್ಸವ: ಮಹಿಳಾ ಟ್ವೆಂಟಿ–20 ಟೂರ್ನಿ
Last Updated 8 ಜನವರಿ 2021, 14:14 IST
ಅಕ್ಷರ ಗಾತ್ರ

ಬೆಂಗಳೂರು: ದಿವ್ಯಾ ಜ್ಞಾನಾನಂದ (ಔಟಾಗದೆ 83) ಅವರ ಅಮೋಘ ಬ್ಯಾಟಿಂಗ್ ಬಲದಿಂದ ಹೆರಾನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವು ಅಮೇಯ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. ಫಾಲ್ಕನ್ ಕ್ಲಬ್ ಸುವರ್ಣ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಮಹಿಳಾ ಟ್ವೆಂಟಿ–20 ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಹೆರಾನ್ಸ್‌ಗೆ 8 ವಿಕೆಟ್‌ಗಳ ಜಯ ಒಲಿಯಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಮೇಯ ತಂಡವು, ವೇದಾ ಕೃಷ್ಣಮೂರ್ತಿ ಅವರ ಅರ್ಧಶತಕದ (62) ನೆರವಿನಿಂದ 129 ರನ್ ಕಲೆ ಹಾಕಿತ್ತು. ಸಾಧಾರಣ ಗುರಿ ಬೆನ್ನತ್ತಿದ ಹೆರಾನ್‌ಗೆ ದಿವ್ಯಾ ಜ್ಞಾನಾನಂದ ಭರ್ಜರಿ ಆಟದ ಮೂಲಕ ಮೂರು ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ಮಿನ್ನು ಮಣಿ (31) ದಿವ್ಯಾ ಅವರಿಗೆ ಸಹಕಾರ ನೀಡಿದರು.

ಮತ್ತೊಂದು ಪಂದ್ಯದಲ್ಲಿ ಕಿಣಿ ಸ್ಪೋರ್ಟ್ಸ್ ಕ್ಲಬ್‌ 13 ರನ್‌ಗಳಿಂದ ಶೀನ್‌ ಸ್ಪೋರ್ಟ್ಸ್ ಕ್ಲಬ್‌ ಎದುರು ಗೆದ್ದಿತು. ತಂಡಕ್ಕೆ ಟೂರ್ನಿಯಲ್ಲಿ ಇದು ಮೂರನೇ ಜಯ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಣಿ, ದೀಪ್ತಿ ಶರ್ಮಾ (18ಕ್ಕೆ 4) ಅವರ ಬೌಲಿಂಗ್ ದಾಳಿಗೆ ತತ್ತರಿಸಿತು. ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 128 ರನ್ ಕಲೆ ಹಾಕಿತು. ತಂಡದ ಪೂನಂ ರಾವತ್‌ (40) ಮಿಂಚಿದರು. ಆದರೆ ಸಾಧಾರಣ ಮೊತ್ತವನ್ನು ಕಿಣಿ ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಶೀನ್ ತಂಡ 6 ವಿಕೆಟ್‌ಗೆ 115 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರುಗಳು: ಅಮೇಯ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 129 (ವೇದಾ ಕೃಷ್ಣಮೂರ್ತಿ 62, ಮೋನಾ ಮೇಶ್ರಾಮ್‌ 31; ಅದಿತಿ ರಾಜೇಶ್‌ 23ಕ್ಕೆ 2). ಹೆರಾನ್ ಸ್ಪೋರ್ಟ್ಸ್ ಕ್ಲಬ್‌: 19.3 ಓವರ್‌ಗಳಲ್ಲಿ 2 ವಿಕೆಟ್‌ಗೆ 132 (ದಿವ್ಯಾ ಜ್ಞಾನಾನಂದ ಔಟಾಗದೆ 83, ಮಿನ್ನು ಮಣಿ 31). ಫಲಿತಾಂಶ: ಹೆರಾನ್ ಸ್ಪೋರ್ಟ್ಸ್ ಕ್ಲಬ್‌ಗೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ ಆಟಗಾರ್ತಿ: ದಿವ್ಯಾ ಜ್ಞಾನಾನಂದ.

ಕಿಣಿ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 128 (ರೋಶನಿ ಕಿರಣ್‌ 35, ಪೂನಂ ರಾವತ್‌ 40, ನುಜ್ರತ್‌ ಪರ್ವೀನ್‌ 28; ದೀಪ್ತಿ ಶರ್ಮಾ 18ಕ್ಕೆ 4, ರಕ್ಷಿತಾ ಕೃಷ್ಣಪ್ಪ 27ಕ್ಕೆ 3). ಶೀನ್‌ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 115 ( ವೃಂದಾ ದಿನೇಶ್‌ 38, ದೀಪ್ತಿ ಶರ್ಮಾ 24, ರಕ್ಷಿತಾ ಕೃಷ್ಣಪ್ಪ 13, ಜೆಮಿಮಾ ರಾಡ್ರಿಗಸ್‌ 12, ಪ್ರತ್ಯೂಷಾ ಸಿ. 17ಕ್ಕೆ 2) ಫಲಿತಾಂಶ: ಕಿಣಿ ಸ್ಪೋರ್ಟ್ಸ್ ತಂಡಕ್ಕೆ 13 ರನ್‌ಗಳ ಜಯ. ಪಂದ್ಯಶ್ರೇಷ್ಠ ಆಟಗಾರ್ತಿ: ಪೂನಂ ರಾವತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT