ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಟೆಸ್ಟ್‌ ಪಂದ್ಯ: ರಾಜಕೋಟ್‌ಗೆ ಬಂದಿಳಿದ ಇಂಗ್ಲೆಂಡ್ ತಂಡ

Published 12 ಫೆಬ್ರುವರಿ 2024, 16:18 IST
Last Updated 12 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ರಾಜಕೋಟ್‌: ಅಬುಧಾಬಿಯಲ್ಲಿ ಒಂದು ವಾರ ವಿರಾಮ ‍‍ಪಡೆದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಸೋಮವಾರ ಆತಿಥೇಯರ ವಿರುದ್ಧದ ಐದು ಪಂದ್ಯಗಳ ಸರಣಿಯ ಉಳಿದ ಪಂದ್ಯಕ್ಕಾಗಿ ಭಾರತಕ್ಕೆ ಮರಳಿದೆ. ಉಭಯ ತಂಡಗಳು 1–1 ರಿಂದ ಸಮಬಲ ಸಾಧಿಸಿವೆ. 

ಮೂರನೇ ಟೆಸ್ಟ್ ಪಂದ್ಯ ನಡೆಯುವ ಸ್ಥಳಕ್ಕೆ ಇಂಗ್ಲೆಂಡ್ ತಂಡದ ಆಟಗಾರರು ಸೋಮವಾರ ಸಂಜೆ ಬಂದಿಳಿದಿದ್ದಾರೆ. ಫೆಬ್ರುವರಿ 15 ರಿಂದ ಇಲ್ಲಿ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.  

ವಿಶಾಖಪಟ್ಟಣದಲ್ಲಿ 106 ರನ್‌ಗಳ ಸೋಲಿನ ನಂತರ, ಇಂಗ್ಲೆಂಡ್ ಆಟಗಾರರು ಹತ್ತು ದಿನಗಳ ವಿಶ್ರಾಂತಿಗಾಗಿ ಅಬುಧಾಬಿಗೆ ತೆರಳಿದರು. ‌ಅಲ್ಲಿ ಆಟಗಾರರು ಗಾಲ್ಫ್ ಆಟದಲ್ಲಿ ತೊಡಗಿಸಿಕೊಂಡರು. 

ಪ್ರವಾಸಿ ತಂಡವು ಮಂಗಳವಾರ ಬೆಳಿಗ್ಗೆಯಿಂದ ಎಸ್‌ಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ಪ್ರಾರಂಭಿಸಲಿದ್ದು, ಭಾರತದ ಆಟಗಾರರು ಮಧ್ಯಾಹ್ನ ಅಭ್ಯಾಸ ನಡೆಸಲಿದ್ದಾರೆ.

ಭಾರತಕ್ಕೆ ಮರಳುವ ಒಂದು ದಿನ ಮೊದಲು, ಇಂಗ್ಲೆಂಡ್ ತಂಡದ ಮುಂಚೂಣಿ ಸ್ಪಿನ್ನರ್ ಜಾಕ್ ಲೀಚ್ ಮೊಣಕಾಲು ಗಾಯದಿಂದಾಗಿ ಉಳಿದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಲೀಚ್‌ಗೆ ಯಾವುದೇ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ.  

ಸ್ಪಿನ್ನರ್‌ಗಳಾದ  ಟಾಮ್ ಹಾರ್ಟ್ಲಿ, ರೆಹಾನ್ ಅಹ್ಮದ್ ಮತ್ತು ಶೋಯೆಬ್ ಬಶೀರ್ ಅವರೇ ಪ್ರವಾಸದಲ್ಲಿ ಮುಂದುವರಿಯುತ್ತಾರೆ ಎಂಬ ಸೂಚನೆಯಾಗಿದೆ. ಮೂವರು ನಿಯಮಿತ ಸ್ಪಿನ್ನರ್‌ಗಳೊಂದಿಗೆ ಜೋ ರೂಟ್ ತಂಡದ ನಾಲ್ಕನೇ ಸ್ಪಿನ್ ಆಯ್ಕೆಯಾಗಿದ್ದಾರೆ.

ಸರಣಿಗೆ ಮುಂಚಿತವಾಗಿ ಅಬುಧಾಬಿ ಶಿಬಿರದಲ್ಲಿ, ಇಂಗ್ಲೆಂಡ್ ತಂಡವು ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸುವ ಮಾರ್ಗಗಳ ಬಗ್ಗೆ ಸಾಕಷ್ಟು ಸಮಯವನ್ನು ಕಳೆದಿತ್ತು.

ನಾಲ್ಕನೇ ಮತ್ತು ಐದನೇ ಟೆಸ್ಟ್ ಪಂದ್ಯಗಳು ರಾಂಚಿ ಮತ್ತು ಧರ್ಮಶಾಲಾದಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT