ಶುಕ್ರವಾರ, ನವೆಂಬರ್ 27, 2020
23 °C

ಸ್ನೇಹಿತರೊಂದಿಗೆ ಗಾಲ್ಫ್ ಆಡಿದ ಕಪಿಲ್ ದೇವ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎರಡು ವಾರಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಗುರುವಾರ ಸ್ನೇಹಿತರೊಂದಿಗೆ ಗಾಲ್ಫ್ ಆಡಿ ಸಂತಸಪಟ್ಟರು.

ಭಾರತ ಕ್ರಿಕೆಟ್‌ ತಂಡಕ್ಕೆ ಮೊದಲ ಸಲ ವಿಶ್ವಕಪ್ ಗೆದ್ದುಕೊಟ್ಟ ನಾಯಕನೆಂಬ ಹೆಗ್ಗಳಿಕೆಯಿರುವ ಕಪಿಲ್ ದೇವ್ ಈಗ ಸಂಪೂರ್ಣ ಫಿಟ್ ಆಗಿರುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

’ಗಾಲ್ಫ್  ಕೋರ್ಸ್‌ಗೆ ಮರಳಿರುವುದು ಬಹಳ ಸಂತಸವಾಗಿದೆ. ಅದನ್ನು ವರ್ಣಿಸಲು ನನಗೆ ಪದಗಳು ಸಾಲದು. ವೈದ್ಯರ ಸಲಹೆಯ ನಂತರವಷ್ಟೇ ಇಲ್ಲಿಗೆ ಬಂದು ಆಡುತ್ತಿದ್ದೇನೆ. ಎಲ್ಲ ಸ್ನೇಹಿತರನ್ನು ಭೇಟಿಯಾಗಿರುವುದು ಮತ್ತು ಆಟದಲ್ಲಿ ತೊಡಗಿಕೊಂಡಿರುವುದು ಬಹಳ ಉತ್ತಮ ಅನುಭವ‘ ಎಂದು ಟ್ವಿಟರ್‌ನಲ್ಲಿ ಹಾಕಿರುವು ವಿಡಿಯೊದಲ್ಲಿ ಕಪಿಲ್ ಹೇಳಿದ್ದಾರೆ. 

61 ವರ್ಷದ ಕಪಿಲ್, ಅವರು ಆ್ಯಂಜಿಯೊಪ್ಲಾಸ್ಟಿ ಚಿಕಿತ್ಡೆ ಪಡೆದು ಚೇತರಿಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.